Breaking:

ಮಾಣಿ; ಜ್ವರದಿಂದ 22 ವರ್ಷದ ಯುವಕ ಮೃತ್ಯು

ಯುವಕನೋರ್ವ ಅನಾರೋಗ್ಯದಿಂದ ನಿಧನರಾದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಪಂತಡ್ಕದಲ್ಲಿ ನಡೆದಿದೆ.

ನೇರಳಕಟ್ಟೆ ಪಂತಡ್ಕದ ಹನೀಫ್ ಎಂಬವರ ಪುತ್ರ ಬಾತಿಷಾ(22) ಮೃತಪಟ್ಟ ಯುವಕ. ಇವರು ಮಂಗಳೂರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಂದು ಮೃತಪಟ್ಟಿದ್ದಾರೆ. ಯುವಕ ಡೆಂಗ್ಯೂ ಜ್ವರಕ್ಕೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಮೃತದೇಹ ಮಂಗಳೂರಿನ ಆಸ್ಪತ್ರೆಯಲ್ಲಿದ್ದು, ಮನೆಗೆ ತರಲು ಸಿದ್ಧತೆ ನಡೆಯುತ್ತಿದೆ

 

 

 

 

 

 

Share this article

ಟಾಪ್ ನ್ಯೂಸ್