Breaking:

ಉಪ್ಪಿನಂಗಡಿ: ದಾರುಸ್ಸಲಾಂ ದರ್ಸ್ ವಿದ್ಯಾರ್ಥಿ ನಿಧನ

ಉಪ್ಪಿನಂಗಡಿ; ದಾರುಸ್ಸಲಾಂ ದರ್ಸ್ ಕರಾಯ ವಿದ್ಯಾರ್ಥಿಯೋರ್ವ ದಿಡೀರ್ ಮೃತಪಟ್ಟ ಘಟನೆ ನಡೆದಿದೆ.

ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದ ಸಿರಾಜುದ್ದೀನ್ ಗಂಡಿಬಾಗಿಲು ಮೃತ ವಿದ್ಯಾರ್ಥಿ. ಆತೂರು ನಿವಾಸಿಯಾಗಿರುವ ಸಿರಾಜುದ್ದೀನ್ ಕಳೆದ ಎರಡು ವರ್ಷಗಳಿಂದ ದಾರುಸ್ಸಲಾಂ ಬೆಳ್ತಂಗಡಿ ಸಂಸ್ಥೆಯಲ್ಲಿ ಕಲಿಯುತ್ತಿದ್ದ ಎನ್ನಲಾಗಿದೆ.

ವಿದ್ಯಾರ್ಥಿ ಅನಾರೋಗ್ಯದಿಂದ ಮರಣ ಹೊಂದಿದ್ದಾನೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ…

 

Share this article

ಟಾಪ್ ನ್ಯೂಸ್