ಯುವಕನೊಬ್ಬ ತನ್ನ ಸಹೋದರನಿಗೆ ವಾಟ್ಯ್ಸಾಪ್ ವಿಡಿಯೋ ಕಳಿಸಿ ನಾಲೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಕುಣಿಗಲ್ ದೊಡ್ಡಕೆರೆಯ ಕೋಡಿ ಹಾಲಮಡುವಿನಲ್ಲಿ ನಡೆದಿದೆ.
ಪಟ್ಟಣದ ಮಹವೀರ ನಗರದ ನಿವಾಸಿ ಬಿ.ಆನಂದ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಬಿ.ಆನಂದ್ ಕುಣಿಗಲ್ ತಾಲೂಕಿನ ಅಂಚೇಪಾಳ್ಯ ಪ್ರದೇಶದ ವಿನರ್ ಬರ್ಗರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ.
ಆನಂದ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಸಹೋದರ ಸಾಗರ್‌ಗೆ ವಿಡಿಯೋ ಮಾಡಿ ಕಳುಹಿಸಿದ್ದು, ನನ್ನ ಸಾವಿಗೆ ಯಾರು ಕಾರಣರಲ್ಲ, ನನಗೆ ಬದುಕಲು ಇಷ್ಟವಿಲ್ಲ ಹಾಗಾಗಿ ನಾನು ಸಾಯುತ್ತಿದ್ದೇನೆ ಎಂದು ವಾಟ್ಯ್ಸಾಪ್ ವಿಡಿಯೋ ಕಳಿಸಿ ಕುಣಿಗಲ್ ದೊಡ್ಡಕೆರೆ ಕೋಡಿಯ ಹಾಲಮಡುವಿನ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಮೃತನ ಸಹೋದರ ಸಾಗರ್ ಪೊಲೀಸರಿಗೆ ದೂರು ನೀಡಿದ್ದಾರೆ.