SDPI ಮಂಚಿ ಬೂತ್ ಸಮಿತಿ ವತಿಯಿಂದ ಹಲವಾರು ವರ್ಷಗಳಿಂದ ಹದಗೆಟ್ಟ ರಸ್ತೆ ಸರಿಪಡಿಸಲು ಮಂಚಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ಚರ್ಚೆ ನಡೆಸಲಾಗಿದೆ.
ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕೈಯ್ಯುರು ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ಇದರ ಬಗ್ಗೆ ಊರಿನ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ದಿನಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಕೈಯ್ಯುರಿನ ಯುವಕರು ಈ ಬಗ್ಗೆ ಪ್ರಸ್ತಾಪ ಮಾಡಿದ್ದರು.
ರಸ್ತೆ ವಿಚಾರವಾಗಿ ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ GM ಇಬ್ರಾಹಿಂ ರವರಲ್ಲಿ ಚರ್ಚೆ ನಡೆಯಿತು ಆದಷ್ಟು ಬೇಗ ರಸ್ತೆ ಸರಿಪಡಿಸಲು ಪೂರ್ಣ ಪ್ರಮಾಣದಲ್ಲಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ Sdpi ಮಂಚಿ ಬೂತ್ ಸಮಿತಿ ಅಧ್ಯಕ್ಷ ಜಬ್ಬಾರ್ ಮಂಚಿ ಹಾಗೂ ಕಾರ್ಯದರ್ಶಿ DN ಫಾರೂಕ್ ಮಂಚಿ ಹಾಗೂ ಅಬ್ದುಲ್ಲಾ ನಾಡಜೆ ಅಝರ್ ಮಂಚಿ ಫೈಝಲ್ ಮಂಚಿ ಹಾಗೂ ಶರೀಫ್ ಕುಕ್ಕಾಜೆ ಉಪಸ್ಥಿತರಿದ್ದರು.