Breaking:

ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ಚಾಲನೆಗೆ ಬ್ರೇಕ್: ವಾಹನ ಚಾಲಕರಿಗೆ ಬಹುಮುಖ್ಯ ಮಾಹಿತಿ

ಮಂಗಳೂರು: ಮಳೆ ಹಿನ್ನಲೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ವೇಗಕ್ಕೆ ಮಿತಿ ನಿಗದಿಪಡಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಆಡಳಿತವು ಜಿಲ್ಲೆಯ ಎನ್‌ಎಚ್-66ನಲ್ಲಿ ಸುರತ್ಕಲ್‌ನಿಂದ ತೊಕ್ಕೊಟ್ಟು ಜಂಕ್ಷನ್‌ವರೆಗೆ ಮತ್ತು ಬಿ.ಸಿ ರೋಡ್ ನಿಂದ ನಂತೂರು ಜಂಕ್ಷನ್ ವರೆಗೆ ಎನ್‌ಎಟಚ್-73 ರಲ್ಲಿ ದ್ವಿಚಕ್ರ, ತ್ರಿಚಕ್ರ ಮತ್ತು ಘನ ವಾಹನಗಳನ್ನು ಗಂಟೆಗೆ 40 ಕಿ.ಮೀ.ಗೆ ನಿರ್ಬಂಧಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಂಟೆಗೆ 60 ಕಿಮೀ ವೇಗದ ಮಿತಿಯಲ್ಲಿ ಚಾಲನೆ ಮಾಡಲು ಸಲಹೆ ನೀಡಲಾಗಿದೆ ಎಂದು ಭಾರತೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ಅನುಷ್ಟಾನ ಘಟಕದ ಯೋಜನಾ ನಿರ್ದೇಶಕರು ಮತ್ತು ಹೆದ್ದಾರಿ ನಿರ್ವಾಹಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article

ಟಾಪ್ ನ್ಯೂಸ್