ಮಂಗಳೂರು:ಮಾದಕ ವಸ್ತು ಸೇವನೆ ಮಾಡಿದ್ದ ಇಬ್ಬರನ್ನು ನಗರದ ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಆಸೀರ್(27) ಮತ್ತು ಶಾಂತಿನಗರದ ಮೊಹಮ್ಮದ್ ನೌಶೀನ್(29) ಬಂಧಿತ ಆರೋಪಿಗಳು.
ಆ.23ರಂದು ರಾತ್ರಿ ಕಾವೂರು ಶಾಂತಿನಗರದ ಮೈದಾನದ ಬಳಿ ಇದ್ದ ಕೂಳೂರಿನ ಮೊಹಮ್ಮದ್ ಆಸೀರ್(27) ಮತ್ತು ಶಾಂತಿನಗರದ ಮೊಹಮ್ಮದ್ ನೌಶೀನ್(29)ನನ್ನು ಅನುಮಾನದಿಂದ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.