ಮಂಗಳೂರು:ನಗರದ ಸೆಂಟ್ರಲ್ ರೈಲ್ವೇ ಸ್ಟೇಷನ್ ರಿಕ್ಷಾ ಪಾರ್ಕ್ ನಲ್ಲಿ ಕ್ಯೂ ನಲ್ಲಿರುವಾಗಲೇ ರಿಕ್ಷಾ ಚಾಲಕರೊಬ್ಬರು ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಮಂಗಳವಾರ ವರದಿಯಾಗಿದೆ.
ಬಜಾಲ್ ವಿದ್ಯಾ ನಗರದ ನಿವಾಸಿ ಇಕ್ಬಾಲ್ (47)ಮೃತ ಚಾಲಕ. ಪ್ರಸ್ತುತ ಅಡ್ಯಾರ್ ಕಣ್ಣೂರಿನ ಬೋರುಗುಡ್ಡೆಯ ಬಾಡಿಗೆ ಮನೆಯಲ್ಲಿ ಅವರು ವಾಸವಾಗಿದ್ದರು.
ರಿಕ್ಷಾ ಪಾರ್ಕ್ ನಲ್ಲಿ ಕ್ಯೂ ನಲ್ಲಿರುವಾಗಲೇ ಇಕ್ಬಾಲ್ ರವರಿಗೆ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣವೇ ಇತರ ರಿಕ್ಷಾ ಚಾಲಕರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಮೂರು ಮಕ್ಕಳು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.