ಕಾಸರಗೋಡು: ಪ್ರತ್ಯೇಕ ಘಟನೆಗಳಲ್ಲಿ ಮೂವರು ಯುವಕರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಜೇಶ್ವರ ಹೊಸಬೆಟ್ಟು ಸಸಿಹಿತ್ಲುವಿನ ಗೌತಮ್ ರಾಜ್ (23) , ಕುಂಜತ್ತೂರು ಮರಿಯಾಶ್ರಮ ಚರ್ಚ್ ಕಾಂಪೌಡ್ ನ ಬ್ರಾಯನ್ ಪಿಂಟೊ (20) ಮತ್ತು ಮೊರತ್ತಣೆ ಕಜೆಕೋಡಿಯ ಬಿ.ರಾಜೇಶ್ (40) ಆತ್ಮಹತ್ಯೆ ಮಾಡಿಕೊಂಡವರು.
ಮಂಜೇಶ್ವರ ಹೊಸ ಬೆಟ್ಟು ನಲ್ಲಿ ಗೌತಮ್ ರಾಜ್ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದರು. ಮಂಗಳವಾರ ಮಧ್ಯಾಹ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಮಂಜೇಶ್ವರ ಮೊರತ್ತಣೆಯ ರಾಜೇಶ್ (40) ಮನೆ ಸಮೀಪದ ಮರ ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಅವರು ಕಾಂಕ್ರೀಟ್ ಕಾರ್ಮಿಕರಾಗಿದ್ದರು. ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಕುಂಜತ್ತೂರಿನ ಬ್ರಾಯನ್ ಪಿಂಟೊ ಸೋಮವಾರ ರಾತ್ರಿ ಮನೆಯಿಂದ ಸ್ಕೂಟರ್ ನಲ್ಲಿ ತೆರಳಿದ್ದು, ತರವಾಡು ಮನೆ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಮೂರು ಪ್ರಕರಣದ ಬಗ್ಗೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.