Breaking:

ಮೈಮೇಲೆ ಡೀಸೆಲ್‌ ಸುರಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ

ಮೈಮೇಲೆ ಡೀಸೆಲ್‌ ಸುರಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ‌ಹೃದಯವಿದ್ರಾವಕ ಘಟನೆ ಚಿಂಚೋಳಿ ತಾಲೂಕಿನ ಮನ್ನಾಎಕ್ಕೆಳ್ಳಿ ರಾಜ್ಯ ಹೆದ್ದಾರಿಯ ಫತ್ತೆಪುರ ಗ್ರಾಮದ ಕ್ರಾಸ್ ನಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ರೇಕುಳಗಿ ಗ್ರಾಮದ ಮಹೇಶ್ ಮಾರುತಿ ನಾಗನಕೇರಾ(27) ಮೃತಪಟ್ಟ ವ್ಯಕ್ತಿ.

ಮಹೇಶ್ ಮಾರುತಿ ಹೆಂಡತಿಯ ತವರು ‌ಮನೆಯಲ್ಲಿ ಹೆಂಡತಿ ‌ಮಕ್ಕಳೊಂದಿಗೆ‌ ವಾಸವಾಗಿರುತ್ತಿದ್ದು. ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಈ ಹಿಂದೊಮ್ಮೆ ಆತ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಈತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಚಿಂಚೋಳಿ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಈ ಕುರಿತು ಚಿಂಚೋಳಿ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article

ಟಾಪ್ ನ್ಯೂಸ್