ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿರುವುದು ನಾಯಿ ಮಾಂಸವಲ್ಲ, ಅದು ಮೇಕೆ ಮಾಂಸ. ಪ್ರಯೋಗಾಲಯದ ವರದಿಯಲ್ಲಿ ಮೇಕೆ ಮಾಂಸ ಎಂದು ಬಂದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರು ನಾಯಿ ಮಾಂಸ ಪ್ರಕರಣ ವಿಚಾರ ನಗರದಲ್ಲಿ ಪ್ರತಿಕ್ರಿಯಿಸಿ, ಲ್ಯಾಬ್ ಪರೀಕ್ಷೆಯಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ದುರುದ್ದೇಶದಿಂದ ಈ ಬಗ್ಗೆ ದೂರು ದಾಖಲಾಗಿತ್ತು ಎಂದು ಗೃಹ ಸಚಿವರು ಹೇಳಿದ್ದಾರೆ.
ರಾಜಸ್ಥಾನದಿಂದ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ, ವಾರಕ್ಕೊಮ್ಮೆ, 15 ದಿವಸಕ್ಕೊಮ್ಮೆ ಮಾಂಸ ಮಾರಾಟ ಮಾಡುತ್ತಾರೆ. ನಾಯಿ ಮಾಂಸ ಅಲ್ಲ, ಅದು ಮೇಕೆ ಮಾಂಸ ಎನ್ನುವುದು ವರದಿಯಲ್ಲಿ ಧೃಡವಾಗಿದೆ. ಇವತ್ತು ವರದಿ ಬಂದಿದೆ ಎಂದು ತಿಳಿಸಿದ್ದಾರೆ.
ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿದೆ ಎಂದು ಆರೋಪಿಸಿ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಜು.26ರಂದು ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಗ್ಯಾಂಗ್ ರಾದ್ದಾಂತ ನಡೆಸಿತ್ತ. ಆ ಬಳಿಕ ಆತನಿಗೆ ಬಂಧಿಸಲಾಗಿದೆ.