Breaking:

ಹೈದರಾಬಾದ್ ಮಕ್ಕಾ ಮಸೀದಿ ಧ್ವನಿವರ್ಧಕ ವಿವಾದ: ಪೊಲೀಸರಿಂದ ಸ್ಪಷ್ಟನೆ

ಹೈದರಾಬಾದ್: ಮಕ್ಕಾ ಮಸೀದಿಯ ಧ್ವನಿವರ್ಧಕಗಳ ಬಗ್ಗೆ ಗಲಾಟೆ ನಡೆದ ನಂತರ ಹೈದರಾಬಾದ್ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಪೊಲೀಸರು ಪರಿಸ್ಥಿತಿಯನ್ನು ಗಮನಿಸಿ, ಒಂದು ಗಂಟೆಯೊಳಗೆ ಅದನ್ನು ಪರಿಹರಿಸಲಾಯಿತು ಎಂದು ದಕ್ಷಿಣ ವಲಯ ಡಿಸಿಪಿ ಸ್ನೇಹಾ ಮೆಹ್ರಾ ಹೇಳಿದ್ದಾರೆ. ಪೊಲೀಸರು ಮಕ್ಕಾ ಮಸೀದಿ ಸೂಪರಿಂಟೆಂಡೆಂಟ್‌ಗೆ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಒತ್ತಿ ಹೇಳಿದರು.
ಮಕ್ಕಾ ಮಸೀದಿ ಅಧೀಕ್ಷಕರ ಸೂಚನೆ ಮೇರೆಗೆ ಧ್ವನಿವರ್ಧಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.

ನಿನ್ನೆ, ಹೈದರಾಬಾದ್‌ನ ಮಕ್ಕಾ ಮಸೀದಿಯಲ್ಲಿ ಅಧಿಕಾರಿಗಳು ಧ್ವನಿವರ್ಧಕಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನಂತರ ವಿವಾದ ಭುಗಿಲೆದ್ದಿತು. ಆದರೆ ವಿವಾದದ ಬಳಿಕ ಸಂಪರ್ಕವನ್ನು ಮರು ಸ್ಥಾಪಿಸಲಾಗಿದೆ.

ಮಸೀದಿಯ ಅಧೀಕ್ಷಕರು ಮತ್ತು ಮಸೀದಿಯ ಇತರ ಸ್ಥಳೀಯ ಸಿಬ್ಬಂದಿ ಚಾರ್ಮಿನಾರ್ ಪೊಲೀಸರ ನಿದರ್ಶನದ ಮೇರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. 

ವಿಷಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ  ವಕ್ಫ್ ಬೋರ್ಡ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಮಸೀದಿಗೆ ಭೇಟಿ ನೀಡಿದ್ದರು. ಮಸೀದಿ ಅಧೀಕ್ಷಕರು ಮತ್ತು ಇತರ ಸಿಬ್ಬಂದಿಯನ್ನು ವಿಚಾರಿಸಿದ ನಂತರ ಸಮಸ್ಯೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.




Share this article

ಟಾಪ್ ನ್ಯೂಸ್