ಮಳೆ ಹಾನಿ ಪ್ರದೇಶಕ್ಕೆ ಶಾಸಕ ಹರೀಶ್ ಪೂಂಜಾ ತಡವಾಗಿ ಭೇಟಿ ನೀಡಿದ್ದು, ಜನರು ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಸವಾಣಾಲಿನಲ್ಲಿ ನಡೆದಿದೆ.
ಸ್ವಕ್ಷೇತ್ರದ ಜನರೊಂದಿಗೆಯೇ ಶಾಸಕ ಹರೀಶ್ ಪೂಂಜ ಕಿರಿಕ್ ಮಾಡಿದ್ದಾರೆ. ಎಂಎಲ್ಎ ಗೆ ಯಾಕೆ ತಡವಾಗಿ ಬಂದೆ ಎಂದು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ, ಆ ತರ ಪ್ರಶ್ನೆ ಮಾಡಿದ್ರೆ ದೇವರ ಮೇಲೆ ಇಡುತ್ತೇನೆ ಎಂದು ಹರೀಶ್ ಪೂಂಜ ಹೇಳಿದ್ದಾರೆ.
ತೀವ್ರ ಮಳೆ ಹಾನಿ ಆದ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ ಅನುಪಸ್ಥಿತರಿದ್ದರು. ಆದರೆ ಈಗ ಮಳೆ ಕಡಿಮೆಯಾದ ಬಳಿಕ ಸವಾಣಾಲು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಹೀಗಾಗಿ ತಡವಾಗಿ ಬಂದಿದ್ದಕ್ಕೆ ಶಾಸಕ ಹರೀಶ್ ಪೂಂಜಾಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದರು.
ಶಾಸಕ ನನ್ನ ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ನಾಯಿ ಎಂದು ಅವಾಚ್ಯವಾಗಿ ಶಾಸಕ ಪೂಂಜಾ ನಿಂದಿಸಿದ್ದಾರೆ. ಈ ವೇಳೆ ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಶಾಸಕ ಪೂಂಜಾ ಸ್ಥಳದಿಂದ ತೆರಳಿದ್ದಾರೆ.