Breaking:

ಸಂಸದರಾದರೂ ಕಾಯಕ ಬಿಡದ ಡಾ.ಮಂಜುನಾಥ್; ಕಿಡ್ನಿ ವೈಫಲ್ಯ ಹೊಂದಿದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಮೂತ್ರಪಿಂಡ ವೈಫಲ್ಯ ಹೊಂದಿದ್ದ ವ್ಯಕ್ತಿಯೊಬ್ಬರಿಗೆ ಯಶಸ್ವಿಯಾಗಿ ಕಾಂಪ್ಲೆಕ್ಸ್​ ಆಂಜಿಯೋಪ್ಲಾಸ್ಟಿ ಹಾಗೂ ಸ್ಟಂಟ್ ಅಳವಡಿಸುವ ಮೂಲಕ ಸಂಸದ ಹಾಗೂ ಡಾ.ಸಿಎನ್ ಮಂಜುನಾಥ್ ವ್ಯಾಪಕ ಪ್ರಶಂಸೆಗೆ ಕಾರಣರಾಗಿದ್ದಾರೆ.

ತಮ್ಮ ವೈದ್ಯಕೀಯ ವೃತ್ತಿಯಿಂದ ನಿವೃತ್ತರಾಗಿ ರಾಜಕೀಯ ಪ್ರವೇಶ ಮಾಡಿರುವ ಮಂಜುನಾಥ್ ಮೂತ್ರಪಿಂಡ ವೈಫಲ್ಯವಾಗಿದ್ದ ವ್ಯಕ್ತಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

54 ವರ್ಷ ವಯಸ್ಸಿನ ಮೂತ್ರಪಿಂಡ ವೈಫಲ್ಯವಾಗಿದ್ದ ಹಾಗೂ ಶೇ.90ರಷ್ಟು ಬ್ಲಾಕೇಜ್​ ಆಗಿದ್ದ ರೋಗಿಗೆ ಕಾಂಪ್ಲೆಕ್ಸ್​ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಂಟ್ ಅಳವಡಿಸುವ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಈ ಕುರಿತು ಕುದ್ಸು ಸಂಸದ ಮಂಜುನಾಥ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು ಸಂಸದರ ಕಾರ್ಯಕ್ಕೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗಿದೆ.

Share this article

ಟಾಪ್ ನ್ಯೂಸ್