Breaking:

ಶಾಲಾ ಶಿಕ್ಷಕಿಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಕೃತ್ಯದ ಹಿಂದೆ ಅಪ್ರಾಪ್ತರು!

ಮುಳಬಾಗಿಲು ಬಳಿ ಶಾಲಾ ಶಿಕ್ಷಕಿಯನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಪ್ರಕರಣ ಸಂಬಂಧಪಟ್ಟಂತೆ ಬಿಗ್ ಟ್ವಿಸ್ಟ್ ವೊಂದು ಸಿಕ್ಕಿದ್ದು, ಮುಳಬಾಗಿಲು ಮೂಲದ ಆರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 14ರಂದು ಸಂಜೆ ಶಿಕ್ಷಕಿ ದಿವ್ಯಶ್ರೀ (43) ಎಂಬುವವರನ್ನು ಮುಳಬಾಗಿಲು ನಗರದ ಸುಂಕೂ ಲೇಔಟ್ ನಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಜಾಡು ಹಿಡಿದ ನಗರ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಬಲೆ ಬೀಸಿದ್ದರು.

ಅದರಂತೆಯೇ ಇಂದು ತಿರುಪತಿಯಲ್ಲಿ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಆರು ಜನ ಹಂತಕರಲ್ಲಿ ಬಹುತೇಕ ಅಪ್ರಾಪ್ತರು ಎಂಬ ಮಾಹಿತಿ ದೊರಕಿದೆ. ಸದ್ಯ ವಿಚಾರಣೆ ವೇಳೆ ಜಮೀನು ವ್ಯಾಜ್ಯ, ದ್ವೇಷದಿಂದ ಶಿಕ್ಷಕಿ ದಿವ್ಯಶ್ರಿ ಕೊಲೆಗೆ ಸುಫಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸುಫಾರಿ ನೀಡಿದ ಪ್ರಮುಖ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share this article

ಟಾಪ್ ನ್ಯೂಸ್