Breaking:

ಮುಸ್ಲಿಂ ವಿವಾಹ, ವಿಚ್ಛೇದನದ ನೋಂದಣಿ ಕಡ್ಡಾಯ!; ಮಸೂದೆಗೆ ಸಂಪುಟ ಒಪ್ಪಿಗೆ

ಮುಸ್ಲಿಂ ವಿವಾಹ ಹಾಗೂ ವಿಚ್ಛೇದನದ ಕಡ್ಡಾಯ ನೋಂದಾವಣಿ ಮಸೂದೆಗೆ ಅಸ್ಸಾಂ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈ ಕಾಯ್ದೆ ಜಾರಿಯಾದ ಬಳಿಕ ಮುಸ್ಲಿಂ ವಿವಾಹ ಮತ್ತು ವಿಚ್ಛೇದವನ್ನು ನೋಂದಾಯಿಸಿಕೊಳ್ಳುವ ಖಾಝಿಗಳ ಅಧಿಕಾರ ರದ್ದಾಗಲಿದೆ.

ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನಗಳ ಮಸೂದೆ-2024ನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ.

ಇನ್ನು ಮುಸ್ಲಿಂ ವಿವಾಹಗಳನ್ನು ಸರ್ಕಾರ ನೋಂದಣಿ ಮಾಡಿಕೊಳ್ಳಲಿದೆ ಹಾಗೂ ಈ ಹಿಂದಿನಂತೆ ಖಾಝಿಗಳು ಮಾಡುವುದಿಲ್ಲ ಮತ್ತು ಈ ನೋಂದಣಿ ಬಾಲ್ಯವಿವಾಹವನ್ನು ಕಾನೂನುಬಾಹಿರ ಎಂದು ಪರಿಗಣಿಸಲಿದೆ ಎಂದು ಸಿಎಂ ಹಿಮಾಂತ ಬಿಸ್ವ ಶರ್ಮಾ ಎಕ್ಸ್ ಪೋಸ್ಟ್‍ನಲ್ಲಿ ವಿವರಿಸಿದ್ದಾರೆ.

ಖಾಝಿಗಳು ಅಪ್ರಾಪ್ತರ ವಿವಾಹಗಳನ್ನು ಕೂಡಾ ನೋಂದಾಯಿಸುತ್ತಾರೆ. ಬಾಲ್ಯವಿವಾಹದ ಪಿಡುಗು ನಿರ್ನಾಮ ಮಾಡಲು ನಾವು ಬಯಸುತ್ತೇವೆ. ವಿವಾಹ ಮತ್ತು ವಿಚ್ಛೇದನವನ್ನು ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Share this article

ಟಾಪ್ ನ್ಯೂಸ್