Breaking:

ಸೌದಿಯಿಂದ ಬಂದು ಸ್ವಂತ ಅಣ್ಣನ ಮಗನನ್ನೇ ಕೊಲೆ‌ ಮಾಡಿದ ಚಿಕ್ಕಪ್ಪ

ಚಿಕ್ಕಬಳ್ಳಾಪುರ: ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೊಲೆ ಮಾಡಲೆಂದು ಊರಿಗೆ ಬಂದು ತನ್ನ ಸ್ವಂತ ಅಣ್ಣನ ಮಗನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗುಡಿಬಂಡೆ ತಾಲ್ಲೂಕು ಹಂಪಸಂದ್ರದಲ್ಲಿ ನಡೆದಿದೆ.

ನಜೀರ್‌ ಅಹ್ಮದ್‌ ಕೊಲೆಯಾಗಿರುವ ವ್ಯಕ್ತಿಯಾಗಿದ್ದಾರೆ. ಈತನನ್ನು ಚಿಕ್ಕಪ್ಪ ಬಶೀರ್‌ ಅಹ್ಮದ್‌(66) ಕೊಲೆ ಮಾಡಿದ್ದಾರೆ.

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಬಶೀರ್ ಅಹ್ಮದ್  ಇತ್ತೀಚೆಗೆ ಊರಿಗೆ ಬಂದಿದ್ದ. ಯಾವುದೋ ಕಾರಣಕ್ಕೆ ಜಗಳವಾಗಿದ್ದು, ಪಿಸ್ತೂಲ್‌ ತೆಗೆದು ಸ್ವಂತ ಅಣ್ಣನ ಮಗ ನಜೀರ್‌ ಅಹ್ಮದ್‌ನನ್ನು ಕೊಲೆ ಮಾಡಿದ್ದಾರೆ.

ಇತ್ತ, ಗಲಾಟೆ ಬಿಡಿಸಲು ಬಂದ ನಜೀರ್‌ ಅಹ್ಮದ್‌ ತಂದೆ  ಮಾಬೂಸಾಬಿ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಮಾಬೂಸಾಬಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಕುರಿತು ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Share this article

ಟಾಪ್ ನ್ಯೂಸ್