ಖ್ಯಾತ ಬಾಂಗ್ಲಾದೇಶದ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಮುಹಮ್ಮದ್ ಯೂನಸ್, ಕಾರ್ಮಿಕ ಕಾನೂನು ಉಲ್ಲಂಘನೆ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಪ್ರಸ್ತುತ ತನ್ನ ತಾಯ್ನಾಡಿನಲ್ಲಿ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಕಿರುಬಂಡವಾಳ ಆಂದೋಲನದ ಪ್ರವರ್ತಕರಾಗಿರುವ ಯೂನಸ್, 1983ರಲ್ಲಿ ಗ್ರಾಮೀಣ ಬ್ಯಾಂಕ್ ಪರಿಕಲ್ಪನೆಯನ್ನು ರೂಪಿಸಿದರು, ಇದು ಬಡ ಜನರಿಗೆ ಸಣ್ಣ ಸಾಲಗಳನ್ನು ನೀಡುವ ಮೂಲಕ ಕ್ರಾಂತಿಯನ್ನೇ ಸೃಷ್ಟಿಸಿತ್ತು.
ಈ ಕಲ್ಪನೆಯು ಜಾಗತಿಕವಾಗಿ ಗಮನವನ್ನು ಸೆಳೆದಿದೆ. ಇದು ಲಕ್ಷಾಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಿದೆ. ಬಡತನ ವಿರೋಧಿ ಅಭಿಯಾನ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಪ್ರೊಫೆಸರ್ ಯೂನಸ್ ಮತ್ತು ಗ್ರಾಮೀಣ ಬ್ಯಾಂಕ್ ಗೆ ಜಂಟಿಯಾಗಿ 2006ರಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಬಾಂಗ್ಲಾದೇಶದ ಸರ್ಕಾರದೊಂದಿಗೆ ಯೂನಸ್ ಅವರ ಸಂಬಂಧವು ವರ್ಷಗಳಿಂದ ಹದಗೆಟ್ಟಿದೆ.
2008ರಲ್ಲಿ ಪಿಎಂ ಹಸೀನಾ ಅಧಿಕಾರಕ್ಕೆ ಬಂದ ನಂತರ ಬಾಂಗ್ಲಾದೇಶದ ಆಡಳಿತವು ಪ್ರೊಫೆಸರ್ ಯೂನಸ್ ವಿರುದ್ಧ ಸರಣಿ ತನಿಖೆಯನ್ನು ಪ್ರಾರಂಭಿಸಿತು. ಆ ಬಳಿಕ ಅವರನ್ನು ಬಂಧಿಸಲಾಗಿದೆ.
2011ರಲ್ಲಿ, "ಬಡವರ ಬ್ಯಾಂಕರ್" ಎಂದು ಅಂತರಾಷ್ಟ್ರೀಯವಾಗಿ ಹೆಸರು ಪಡೆದಿದ್ದ 83 ವರ್ಷ ವಯಸ್ಸಿನ ಅರ್ಥಶಾಸ್ತ್ರಜ್ಞ ಯೂನುಸ್ ಅವರನ್ನು ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸ್ಥಾನದಿಂದ ಕೂಡ ತೆಗೆದು ಹಾಕಲಾಗಿತ್ತು.