Breaking:

ಪುತ್ತೂರು; ಕೆರೆಗೆ ಹಾರಿ ಪಾಪತ್ತಡ್ಕ ನಿವಾಸಿ ಆಟೋ ಚಾಲಕ ಆತ್ಮಹತ್ಯೆ

-ಮೊಹಮ್ಮದ್ ಆತ್ಮಹತ್ಯೆ ಮಾಡಿಕೊಂಡವರು.

ಪುತ್ತೂರು; ಪಾಪತ್ತಡ್ಕ‌ನಿವಾಸಿ ಆಟೋ ಚಾಲಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಪ್ಯದಲ್ಲಿ ನಡೆದಿದೆ.

ಪಾಪತ್ತಡ್ಕ ನಿವಾಸಿ ಮೊಹಮ್ಮದ್ ಮೃತರು. ಇವರು ಮೂಲತಃ ಪಾಪತ್ತಡ್ಕದವರಾಗಿದ್ದು, ಸಂಪ್ಯದಲ್ಲಿ ವಾಸಿಸುತ್ತಿದ್ದರು.

ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನು ಪುತ್ತೂರಿನ ಆಸ್ಪತ್ರೆಯಲ್ಲಿರಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

 

Share this article

ಟಾಪ್ ನ್ಯೂಸ್