ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ಮೀಸಲಾತಿ ವಿಚಾರದಲ್ಲಿ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಇಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ.
ಬಿಹಾರದಲ್ಲಿ ಬೆಳಗ್ಗೆಯಿಂದಲೇ ಭಾರತ್ ಬಂದ್ ನಡೆಯುತ್ತಿದ್ದು, ಪ್ರತಿಭಟನಾಕಾರರು ಬೆಳಗ್ಗೆಯಿಂದಲೇ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ವೇಳೆ ಗದ್ದಲ ಸೃಷ್ಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಲಾಠಿ ಚಾರ್ಜ್ ಸಂದರ್ಭದಲ್ಲಿ, ಪಾಟ್ನಾ ಸದರ್ ಎಸ್‌ಡಿಎಂ ಮೇಲೆ ಪೊಲೀಸರು ಆಕಸ್ಮಿಕವಾಗಿ ಲಾಠಿಯಿಂದ ಹೊಡೆದಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದ ಭಾರತ್ ಬಂದ್ ವೇಳೆ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡುವಾಗ ಪೊಲೀಸರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ರನ್ನೇ ಪ್ರತಿಭಟನಾಕಾರ ಎಂದು ಭಾವಿಸಿ ಹೊಡೆದಿರುವುದು ಕಂಡುಬಂದಿದೆ.
ಪ್ರತಿಭಟನಾಕಾರರನ್ನು ನಿಯಂತ್ರಿಸುತ್ತಿದ್ದ ಪೊಲೀಸರು ಗೊಂದಲದ ಮಧ್ಯೆ, ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ನಿಂತಿದ್ದ ಎಸ್‌ಡಿಎಂಗೂ ಒಂದೇಟು ಕೊಟ್ಟಿದ್ದಾರೆ. ತಕ್ಷಣವೇ ಅಲ್ಲಿದ್ದ ಇತರ ಪೊಲೀಸರು ಇದನ್ನು ಗಮನಿಸಿ ಮತ್ತೊಂದು ಏಟು ಹೊಡೆಯುವುದನ್ನ ತಡೆದು, ಅವರು ಐಎಎಸ್ ಅಧಿಕಾರಿ ಎಂಬುದನ್ನು ಮನವರಿಕೆ ಮಾಡಿದ್ದಾರೆ. ಇನ್ನು ತಮಗೆ ಲಾಠಿ ಏಟು ಹೊಡೆದ ನಂತರ ಎಸ್‌ಡಿಎಂ ಕೋಪದಲ್ಲಿ ಪೊಲೀಸ್ನತ್ತಾ ನೋಡಿದ್ದಾರೆ. ನಂತರ ಪೊಲೀಸ್ ಅಧಿಕಾರಿ ಬಳಿ ಬಂದು ಕ್ಷಮೆ ಕೇಳಿದ್ದಾರೆ.
SDM was in civil dress, Bihar Police beat him thinking he was a protestor.🤦🏻♂️😂
Hope he doesn't lose his job…
— Mr Sinha (@MrSinha_) August 21, 2024