Breaking:

ಮಮತಾ ಮಾತನಾಡುವಾಗ ಮೈಕ್ ಆಫ್; ನೀತಿ ಆಯೋಗದ ಸಭೆಯಿಂದ ಅರ್ಧದಿಂದ ಹೊರನಡೆದ ಬಂಗಾಳ ಸಿಎಂ

ನವದೆಹಲಿಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ  ಆಯೋಜನೆಗೊಂಡಿದ್ದ ನೀತಿ ಆಯೋಗದ 9ನೇ ಆಡಳಿತಾತ್ಮಕ ಮಂಡಳಿ ಸಭೆಯಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅರ್ಧದಿಂದ ವಾಪಾಸ್ಸಾಗಿದ್ದಾರೆ.

ನನಗೂ ಮೊದಲು ಮಾತನಾಡಿದ ಸಿಎಂಗಳಿಗೆ 20 ನಿಮಿಷಕ್ಕೆ ಸಮಯ ನೀಡಲಾಗಿತ್ತು. ನನಗೆ ಕೇವಲ ಐದು ನಿಮಿಷ ನೀಡಲಾಯಿತು. ನೆರವು ನಿರಾಕರಿಸಿದ ವಿಷಯ ಪ್ರಸ್ತಾಪಿಸಿದ್ದಂತೆ ಮೈಕ್ ಮ್ಯೂಟ್ ಮಾಡಲಾಗಿತ್ತು ಎಂದು ಮಮತಾ ಆರೋಪಿಸಿದ್ದಾರೆ.

ರಾಷ್ಟ್ರಪತಿ ಭವನದ ಸಾಂಸ್ಕೃತಿನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು ಭಾಗಿಯಾಗಿದ್ದರು.

ತಮಿಳುನಾಡು, ಕರ್ನಾಟಕ, ಕೇರಳ, ದೆಹಲಿ,‌ ತೆಲಂಗಾಣ, ಪಂಜಾಬ್ ಸಿಎಂಗಳು ಮೊದಲೇ ಸಭೆಯನ್ನು ಬಹಿಷ್ಕರಿಸಿದ್ದರು.

Share this article

ಟಾಪ್ ನ್ಯೂಸ್