Breaking:

5 ಕೆಜಿ ‘ಆಲೂಗಡ್ಡೆ’ ಲಂಚವಾಗಿ ಬೇಡಿಕೆ ಇಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು

5 ಕೆಜಿ ‘ಆಲೂಗಡ್ಡೆ’ಗೆ ಲಂಚವಾಗಿ ಬೇಡಿಕೆಯಿಟ್ಟಿದ್ದಕ್ಕಾಗಿ ಉತ್ತರ ಪ್ರದೇಶದ ಕನೌಜ್‌ನಲ್ಲಿ ನಿಯೋಜನೆಗೊಂಡಿದ್ದ ಸಬ್‌ ಇನ್‌ಸ್ಪೆಕ್ಟರ್‌ ನ್ನು ಅಮಾನತುಗೊಳಿಸಲಾಗಿದೆ.

ಕೇಸ್ ವೊಂದರ ಇತ್ಯರ್ಥಪಡಿಸಲು ಪೊಲೀಸ್ ಅಧಿಕಾರಿ ರಾಮ್ ಕೃಪಾಲ್ ಸಿಂಗ್ ಲಂಚ ಕೇಳಿರುವ ಆರೋಪದ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ.

ಸೌರಿಖ್‌ ಪೊಲೀಸ್‌ ಠಾಣೆಯಡಿಯಲ್ಲಿ ಬರುವ ಬಹವಲ್ಪುರ್ ಚಾಪುನ್ನ ಚೌಕಿಯ ಇನ್ಸ್‌ ಪೆಕ್ಟರ್‌ ರಾಮ್‌ ಕೃಪಾಲ್‌ ಸಿಂಗ್‌ ಅವರನ್ನು ಅಮಾನತು ಮಾಡಿ ಕನೌಜ್‌ ಎಸ್‌ ಪಿ ಅಮಿತ್‌ ಕುಮಾರ್‌ ಅದೇಶಿಸಿದ್ದಾರೆ. ಅಲ್ಲದೆ ಇದೇ ವೇಳೆ ಇಲಾಖಾ ತನಿಖೆಯನ್ನು ಆದೇಶಿಸಲಾಗಿದೆ.

ವೈರಲ್ ಆಡಿಯೋದಲ್ಲಿ, ಆರೋಪಿ ಪೋಲೀಸ್‌ ಅಧಿಕಾರಿ ರೈತರೊಬ್ಬರಿಗೆ 5 ಕೆಜಿ ‘ಆಲೂಗಡ್ಡೆ’ ಗಾಗಿ ಕೇಳಿದ್ದಾರೆ. ಆದರೆ ರೈತ ಈ ಬೇಡಿಕೆಯನ್ನು ಪೂರೈಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಬದಲಿಗೆ 2 ಕೆಜಿ ನೀಡುತ್ತಾರೆ. ಆಗ ಪೊಲೀಸ್ ಅಧಿಕಾರಿ ಕೋಪಗೊಂಡು ತನ್ನ ಮೂಲ ಬೇಡಿಕೆಯನ್ನು ಒತ್ತಿ ಹೇಳುತ್ತಾನೆ. ನಂತರ ಒಪ್ಪಂದವನ್ನು 3 ಕೆ.ಜಿಗೆ ಅಂತಿಮಗೊಳಿಸಲಾಗಿತ್ತು. ಇಲ್ಲಿ ಆಲೂಗಡ್ಡೆ ಎಂದರೆ ಕೋಡ್ ವರ್ಡ್ ಆಗಿ ಬಳಸಲಾಗಿದೆ ಎನ್ನಲಾಗಿದೆ.

 

 

Share this article

ಟಾಪ್ ನ್ಯೂಸ್