ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಹಾಗೂ ವಿಡಿಯೋ ಚಿತ್ರೀಕರಣ ಮಾಡಿರುವ ಆರೋಪ ಎದುರಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ವಿಡಿಯೋಗಳು ಅಸಲಿಯಾಗಿದ್ದು, ವಿಡಿಯೋಗಳನ್ನು ತಿರುಚಿಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯವು (FSL) ವರದಿ ನೀಡಿದೆ.
ಹಾಸನ ಅಶ್ಲೀಲ ವಿಡಿಯೋ ಕೇಸ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳು ಹಾಗೂ ಪೆನ್‌ಡ್ರೈವ್‌ಗಳಿಂದ ಅಶ್ಲೀಲ ವಿಡಿಯೋಗಳನ್ನು ಎಸ್‌ಐಟಿ ತಂಡ ಸಂಗ್ರಹಿಸಿತ್ತು. ಖಚಿತತೆ ಪಡೆದುಕೊಳಲು ಈ ಎಲ್ಲಾ ವಿಡಿಯೋಗಳನ್ನು FSLಗೆ ಕಳುಹಿಸಲಾಗಿತ್ತು.
ಪ್ರಯೋಗಾಲದಿಂದ ಈ ವಿಡಿಯೋಗಳ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ವರದಿ ತಲುಪಿಸಿದ್ದು, ಎಲ್ಲಾ ವಿಡಿಯೋಗಳು ಅಸಲಿಯಾಗಿವೆ ಎಂದು ವರದಿ ಉಲ್ಲೇಖಿಸಿದೆ.