Breaking:

ಪುತ್ತೂರು ಇರಿತ ಪ್ರಕರಣ; ಶಿಕ್ಷಕಿ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತ ಬಾಲಕಿ

ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಾಲಕಿಯ ಕೈಗೆ ಇರಿತ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಕಿ ವಿರುದ್ಧ  ಸಂತ್ರಸ್ತ ವಿದ್ಯಾರ್ಥಿನಿ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

ಈ ಕುರಿತು ಬಾಲಕಿಯ ಹೇಳಿಕೆಯ ವಿಡಿಯೋ ವೈರಲ್ ಆಗಿದೆ. ಆಸ್ಪತ್ರೆಯಲ್ಲಿ ಹೆಸರು ಬದಲಾಯಿಸಿ ಹೇಳುವಂತೆ ಹಾಗೂ ಕೈಗೆ ಗಾಜು ತಾಗಿ ಗಾಯವಾಗಿದೆ ಎಂದು ಹೇಳಲು ಶಿಕ್ಷಕಿ ಒತ್ತಡ ಹೇರಿದ್ದಾರೆ ಎಂದು ಬಾಲಕಿಯು  ಗಂಭೀರವಾದ ಆರೋಪ ಮಾಡಿದ್ದಾಳೆ.

ಈ ಹಿನ್ನೆಲೆ ಶಿಕ್ಷಕಿ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ವ್ಯಾಪಕವಾದ ಆಗ್ರಹ ವ್ಯಕ್ತವಾಗಿದೆ. ಇದರ ಬೆನ್ನಲ್ಲಿ ನಿನ್ನೆ ಹಲವಾರು ಮಂದಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು.

ಇನ್ನು ಆರೋಪಿತ ವಿದ್ಯಾರ್ಥಿಯ ವಿರುದ್ಧ ಈಗಾಗಲೇ ಪೋಕ್ಸೋ ಪ್ರಕರಣ ಪುತ್ತೂರು ಮಹಿಳಾ ಠಾಣೆಯಲ್ಲಿ ದಾಖಲಾಗಿದೆ.

 

Share this article

ಟಾಪ್ ನ್ಯೂಸ್