ಪುತ್ತೂರು; ಸ್ಕೂಟರ್ ಗೆ ಟ್ಯಾಂಕರ್ ಢಿಕ್ಕಿಯಾದ ಪರಿಣಾಮ ವಿಕಲ ಚೇತನ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪುತ್ತೂರಿನ ಮಂಜಲಪಡ್ಪು ಬಳಿ ನಡೆದಿದೆ.
ಮಿತ್ತೂರು ಏಮಾಜೆಯ ಶಿವರಾಮ ನಾಯ್ಕ ಎಂಬವರು ಮೃತರು.
ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಶಿವರಾಮ ನಾಯ್ಕ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ್ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಶಿವರಾಮ ನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.