Breaking:

ವರದಕ್ಷಿಣೆಗಾಗಿ ಗರ್ಭಿಣಿ ಮಹಿಳೆಯ ಕೈಕಾಲು ಕತ್ತರಿಸಿ ಭೀಕರವಾಗಿ ಕೊಲೆ

ವರದಕ್ಷಿಣೆಗಾಗಿ 23 ವರ್ಷದ ಗರ್ಭಿಣಿ ಮಹಿಳೆಯನ್ನು ಕೊಲೆ ಮಾಡಿ, ಆಕೆಯ ಕೈಕಾಲುಗಳನ್ನು ಕತ್ತರಿಸಿ ದೇಹಕ್ಕೆ ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ರಾಜ್‍ಗಢ ಜಿಲ್ಲೆಯಲ್ಲಿ ನಡೆದಿದೆ.

ಕಾಳಿಪೀಠ ಪೊಲೀಸ್ ಠಾಣೆ ವ್ಯಾಪ್ತಿಯ ತಂಡಿ ಖುರ್ದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ದುರ್ದೈವಿ ಮಹಿಳೆಯನ್ನು ರೀನಾ ತನ್ವಾರ್ ಎಂದು ಗುರುತಿಸಲಾಗಿದೆ.

ರೀನಾಗೆ ಪತಿ ಮಿಥುನ್ ಮತ್ತು ಅತ್ತೆಯಂದಿರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ.

ರೀನಾ ತಂದೆ ರಾಮಪ್ರಸಾದ್ ತನ್ವಾರ್ ಪೊಲೀಸರೊಂದಿಗೆ ತಂಡಿ ಖುರ್ದ್ ಗ್ರಾಮಕ್ಕೆ ತೆರಳಿದಾಗ, ಆಕೆಯ ಉರಿಯುತ್ತಿರುವ ಚಿತೆಯನ್ನು ಬಿಟ್ಟು ಓಡಿಹೋಗಿರುವುದನ್ನು ಅವರು ಕಂಡುಕೊಂಡರು.

ಮನೆಯವರು ಬೆಂಕಿಯನ್ನು ನಂದಿಸಿ ಅರ್ಧ ಸುಟ್ಟ ಆಕೆಯ ದೇಹವನ್ನು ಹೊರತೆಗೆದು ನಂತರ ಬಟ್ಟೆಯಲ್ಲಿ ಸುತ್ತಿ ಶವಪರೀಕ್ಷೆಗೆ ಕಳುಹಿಸಿದ್ದಾರೆ.

ರೀನಾ ತನ್ವರ್ ಐದು ವರ್ಷಗಳ ಹಿಂದೆ ಮಿಥುನ್ ತನ್ವರ್ ಅವರನ್ನು ಮದುವೆಯಾಗಿದ್ದರು. ಆಕೆಗೆ ಒಂದೂವರೆ ವರ್ಷದ ಮಗಳಿದ್ದು, ಎರಡನೇ ಮಗುವಿಗೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಆಕೆಯ ಅತ್ತೆಯಂದಿರು ನನ್ನ ಮಗಳಿಗೆ ಹಣದ ಬೇಡಿಕೆಯನ್ನಿಟ್ಟು ಚಿತ್ರಹಿಂಸೆ ನೀಡುತ್ತಿದ್ದರು ಎಂದು ರಾಮಪ್ರಸಾದ್ ತನ್ವಾರ್ ಆರೋಪಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕಾಳಿಪೀಠ ಪೊಲೀಸ್ ಠಾಣೆಯ ಉಸ್ತುವಾರಿ ರಜನೀಶ್ ಸಿರೋಥಿಯಾ ತಿಳಿಸಿದ್ದಾರೆ.

Share this article

ಟಾಪ್ ನ್ಯೂಸ್