Breaking:

ಪುತ್ರನ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಶಾಸಕಿ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಇಸ್ಲಾಂಗೆ ಮಾತಾಂತರವಾಗುವುದಾಗಿ ಹೇಳಿದ್ದ ಕೈ ಮುಖಂಡನ ವಿರುದ್ದ ಕಠಿಣ ಕಾಯ್ದೆಯಡಿ ಎಫ್ಐಆರ್

ಕಾಂಗ್ರೆಸ್ ದಲಿತ ಮುಖಂಡ ರಾಜೇಶ್ ಅಲಿಯಾಸ್ ರಾಜು ಸೋಲಂಕಿ ತನ್ನ ಪುತ್ರನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗೊಂಡಾಲ್ ಬಿಜೆಪಿ ಶಾಸಕಿ ಗೀತಾಬಾ ಜಡೇಜಾ ಮತ್ತು ಅವರ ಪತಿ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಇಸ್ಲಾಂಗೆ ಮತಾಂತರಗೊಳ್ಳುವುದಾಗಿ ಹೇಳಿದ್ದರು. ಇದೀಗ
ಮೂರು ವಾರಗಳ ನಂತರ, ರಾಜು ಮತ್ತು ಅವರ ಕುಟುಂಬದ ನಾಲ್ವರ ವಿರುದ್ಧ  ಕಠಿಣ ಗುಜರಾತ್ ನಿಯಂತ್ರಣ ಮತ್ತು ಸಂಘಟಿತ ಅಪರಾಧ ಕಾಯ್ದೆ (GUJCTOC) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜುನಾಗಢ್ ಜಿಲ್ಲೆಯ ಸ್ಥಳೀಯ ಅಪರಾಧ ವಿಭಾಗದ (LCB) ಇನ್‌ಸ್ಪೆಕ್ಟರ್ ಜೆಜೆ ಪಟೇಲ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ, GUJCTOC ಕಾಯ್ದೆಯ ಸೆಕ್ಷನ್ 3(1)(2), 3(4) ಅಡಿಯಲ್ಲಿ ಎಫ್‌ಐಆರ್ - ಸಂಘಟಿತ ಅಪರಾಧಕ್ಕೆ ಸಂಬಂಧಿಸಿ ದಾಖಲಾಗಿದೆ.

ಪಟೇಲ್ ತಮ್ಮ ದೂರಿನಲ್ಲಿ ರಾಜು, ಅವರ ಸಹೋದರ ಜಯೇಶ್ ಅಲಿಯಾಸ್ ಜಾವೋ ಅಲಿಯಾಸ್ ಸಾವನ್ ಸೋಲಂಕಿ, ಮಕ್ಕಳಾದ ಸಂಜಯ್ ಮತ್ತು ದೇವ್ ಮತ್ತು ಸೋದರಳಿಯ ಯೋಗೇಶ್ ಬಗ್ಡಾ ಅವರನ್ನು ಆರೋಪಿಗಳೆಂದು ಹೆಸರಿಸಿದ್ದಾರೆ.  

ಹಲ್ಲೆ ಕೇಸ್ ಗೆ ಸಂಬಂಧಿಸಿ ಆರೋಪಿ ಶಾಸಕಿ ಮತ್ತು ಅವರ ಪತಿ ಜಯರಾಜ ಸಿಂಹ ವಿರುದ್ಧ ರಾಜ್ಯ ಸರಕಾರವು ಕ್ರಮ ತೆಗೆದುಕೊಳ್ಳದಿದ್ದರೆ ಇಸ್ಲಾಮ್‌ ಸ್ವೀಕರಿಸುವುದಾಗಿ ರಾಜು ಜು.11ರಂದು ಬೆದರಿಕೆಯೊಡ್ಡಿದ ಮೂರು ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ.



Share this article

ಟಾಪ್ ನ್ಯೂಸ್