Breaking:

ದೇವಸ್ಥಾನಕ್ಕೆಂದು ಕರೆದೊಯ್ದು ಪತ್ನಿಯನ್ನು ಕೊಲೆಗೈದ ಪತಿ

ಡಿವೋರ್ಸ್ ಕೇಳಿದ ಹೆಂಡತಿಯನ್ನು ದೇವಸ್ಥಾನಕ್ಕೆಂದು ಕರೆದೊಯ್ದು ಹತ್ಯೆ ಮಾಡಿರುವ ದುರಂತ ಘಟನೆ ರಾಮನಗರದ ಹೂಜಗಲ್ಲು ಬೆಟ್ಟದಲ್ಲಿ ನಿನ್ನೆ ನಡೆದಿದೆ.

ಕೊಲೆಯಾದ ಮಹಿಳೆಯನ್ನು ದಿವ್ಯಾ (32) ಎಂದು ಗುರುತಿಸಲಾಗಿದೆ. ಕೊಲೆಯನ್ನು ಆಕೆಯ ಪತಿ ಉಮೇಶ್ ಮಾಡಿದ್ದಾನೆ.

ಮದುವೆಯಾಗಿ ಕೆಲವು ವರ್ಷಗಳು ಜೀವನ ನಡೆಸಿದ ಇಬ್ಬರ ನಡುವೆ ಇತ್ತೀಚೆಗೆ ಮನಸ್ತಾಪ ಉಂಟಾಗಿದೆ. ಇದರಿಂದ ನನಗೆ ಡಿವೋರ್ಸ್ ಕೊಟ್ಟುಬಿಡಿ ನಾನು ಬೇರೆ ಜೀವನ ಕಟ್ಟಿಕೊಳ್ಳುತ್ತೇನೆ ಎಂದು ದಿವ್ಯಾ ಕೇಳಿದ್ದಾಳೆ. ಆಗ ಉಮೇಶ್ ತನ್ನ ಹೆಂಡತಿಯನ್ನು ಸಮಾಧಾನಪಡಿಸಿ  ಬುದ್ಧಿಯನ್ನೂ ಹೇಳಿದ್ದಾನೆ. ಆದರೆ ಇದ್ಯಾವುದನ್ನೂ ಕೇಳದ ದಿವ್ಯಾ ಜಗಳ ಮಾಡುತ್ತಲೇ ಡಿವೋರ್ಸ್ ಕೇಳಿದ್ದಾಳೆ‌.

ದಂಪತಿ ನಿನ್ನೆ ಮಾಗಡಿ ಕೋರ್ಟ್‌ಗೆ ಹಾಜರಾಗಿದ್ದರು. ಬಳಿಕ ನಾಟಕವಾಡಿದ್ದ ಉಮೇಶ್‌, ಪತ್ನಿಯನ್ನು ಊಜಗಲ್ಲು ದೇವಸ್ಥಾನಕ್ಕೆ ಕರೆದೊಯ್ದಿದ್ದ. ಊಜಗಲ್ಲು ಬೆಟ್ಟಕ್ಕೆ ಕರೆದೊಯ್ದು ಅಲ್ಲಿ ಪೂಜೆ ಮಾಡುವ ವೇಳೆ ದಿವ್ಯಾಳನ್ನು ಹತ್ಯೆ ಮಾಡಿದ್ದಾನೆ. ಬಳಿಕ ಕೊಂದು ಚೀಲೂರು ಅರಣ್ಯ ಪ್ರದೇಶದಲ್ಲಿ ಶವ ಎಸೆದು ಎಸ್ಕೇಪ್ ಆಗಿದ್ದಾನೆ.

ಈ ಪ್ರಕರಣದ ಸಂಬಂಧ ಐವರ ಮೇಲೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಕೊಲೆಗೆ ಸಹಕರಿಸಿದ ಇನ್ನೂ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share this article

ಟಾಪ್ ನ್ಯೂಸ್