Breaking:

ಮದುವೆಗೆ ನಿರಾಕರಿಸಿದ್ದಕ್ಕೆ ಪ್ರಿಯಕರ ಆತ್ಮಹತ್ಯೆ; ಸುದ್ದಿ ತಿಳಿದು ಚಾಕುವಿನಿಂದ ಇರಿದುಕೊಂಡ ಪ್ರಿಯತಮೆ, ಸ್ಥಿತಿ ಗಂಭೀರ

ಪ್ರೀತಿಸಿದ ಯುವತಿಯನ್ನು ಮದುವೆಗೆ ಕುಟುಂಬದವರು ಒಪ್ಪಿಲ್ಲ ಎಂದು  ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು,  ಈ ವಿಷಯ ತಿಳಿದು ಪ್ರಿಯತಮೆ ಕೂಡಾ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದ ಕಾಯಿಸೊಪ್ಪಿನ ಬೀದಿಯಲ್ಲಿ ನಡೆದಿದೆ.

24 ವರ್ಷದ ಯಶ್ವಂತ್‌ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾರೆ. ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಇವರ ಮದುವೆಗೆ ಯಶ್ವಂತ್‌ ಮನೆಯವರು ಒಪ್ಪಿಲ್ಲ. ಇದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಆತನ ಪ್ರಿಯತಮೆ ಕೂಡಾ ಚುಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದ್ದು, ರಾಮನಗರದ ಬಿಎಂ ಆಸ್ಪತ್ರೆಯಲ್ಲಿರುವ ರಾಮಕೃಷ್ಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಕುರಿತು ರಾಮನಗರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.

Share this article

ಟಾಪ್ ನ್ಯೂಸ್