ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಾಪಾಲರು ಪ್ರಾಸಿಕ್ಯುಷನ್ ಗೆ ಅನುಮತಿ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ಈ ಕುರಿತು ಮಾತನಾಡಿರುವ ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯರನ್ನು ಮಾಸ್ ಲೀಡರ್ ಎಂದು ಕರೆದಿದ್ದಾರೆ.
ಬೆಳಗಾವಿ ನಗರದಲ್ಲಿ ಈ ಕುರಿತು ಮಾತನಾಡಿದ ರಮೇಶ್, ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಕುರಿತು ನಾನು ಮಾತನಾಡುವುದಿಲ್ಲ. ನಮ್ಮ ಪಕ್ಷ ಎನೂ ನಿರ್ಧಾರ ತೆಗೆದುಕೊಳ್ಳುತ್ತೆ ಅದಕ್ಕೆ ನಾನು ಬದ್ಧ. ಕೆಲವೊಂದು ವಿಷಯಗಳನ್ನ ಮಾತಾಡಬಾರದು ಅಂತಾ ನಮ್ಮ ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಿದ್ದೇವೆ. ಅರವಿಂದ್ ಲಿಂಬಾವಳಿ ಒಬ್ಬರೇ ಮಾತನಾಡುತ್ತಾರೆ ಎಂದು ಹೇಳಿದ್ದಾರೆ
ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಆಡಿದ ಪ್ರತಿಯೊಂದು ಮಾತನ್ನು ನೆನೆಪಿಸಿಕೊಳ್ಳುವುದು ಸೂಕ್ತ. ಬೇರೆಯವರ ರೀತಿ ರಾಜಕೀಯ ದುರದ್ದೇಶ ಇಟ್ಟುಕೊಂಡು ನಾನು ಮಾತಾಡುವುದಿಲ್ಲ. ಅವರ ಬಗ್ಗೆ ಗೌರವ ಇದೆ. ಯಡಿಯೂರಪ್ಪ ಅವರಿಗೆ ಮಾತಾಡಿದ್ದನ್ನು ನೆನಪಿಟ್ಟುಕೊಂಡು ಸಿದ್ದರಾಮಯ್ಯ ನಿರ್ಣಯ ತೆಗೆದುಕೊಳ್ಳಲಿ.
ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದರೆ ಕಾಂಗ್ರೆಸ್ಗೆ ಉಳಿಗಾಲವಿಲ್ಲ. ಸಿಡಿ ಶಿವು ಬಂದರೆ ಎರಡು ದಿನದಲ್ಲಿ ಸರ್ಕಾರ ಪತನವಾಗುತ್ತೆ. ಅವರ ವ್ಯಕ್ತಿತ್ವ, ಭ್ರಷ್ಟಾಚಾರ, ಆತ ಮುಖ್ಯಮಂತ್ರಿಯಾದ್ರೆ ರಾಜ್ಯ ಅಧೋಗತಿಗೆ ಹೋಗುತ್ತೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.