ಮೇವು ತರಲು ಹೋಗಿದ್ದ ವೇಳೆ ಹಾವು ಕಡಿದು ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಸಾಗರ ತಾಲ್ಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ರಂಜಿತಾ (22) ಎಂದು ಗುರುತಿಸಲಾಗಿದೆ. ಮೇವು ತರಲು ಹೋಗಿದ್ದ ವೇಳೆ ಪೊದೆಯಲ್ಲಿದ್ದ ಹಾವೊಂದು ಮಹಿಳೆಗೆ ಕಡಿದಿದೆ ಎನ್ನಲಾಗಿದೆ.
ಹಾವು ಕಡಿದ ಕೆಲಹೊತ್ತಿನ ಬಳಿಕ ಹಾವು ಕಚ್ಚಿರುವುದು ಅವರ ಅರಿವಿಗೆ ಬಂದಿದೆ. ಕುಟುಂಬಸ್ಥರು ನೋಡಿದಾಗ ರಂಜಿತಾ ಗದ್ದೆಯಲ್ಲಿ ಕುಸಿದು ಬಿದ್ದಿದ್ದರು. ಇದನ್ನು ಗಮನಿಸಿ ತಕ್ಷಣ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರಂಜಿತ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.