Breaking:

ರಾಯಚೂರು: ದರ್ಗಾವೊಂದರಲ್ಲಿ ಕಂಡು ಬಂದ ಅಚ್ಚರಿಯ ಬೆಳವಣಿಗೆ; ಮೂಕ ವಿಸ್ಮಿತರಾದ ಜನ

ರಾಯಚೂರು: ದರ್ಗಾದಲ್ಲಿ ಅಚ್ವರಿಯ ಬೆಳವಣಿಗೆ ನಡೆದಿರುವ ಘಟನೆ  ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಆನಾಹೊಸೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶರಣರ ಬಾವಿ ದರ್ಗಾ ಶರೀಫ್‌ನಲ್ಲಿರುವ 3 ಮಜಾರಗಳು ಉಸಿರಾಡುತ್ತಿವೆ. ನೂರಾರು ವರ್ಷಗಳ ಧರ್ಮ ಗುರುಗಳ ಗೋರಿ ಉಸಿರಾಟ ಕುತೂಹಲ ಮೂಡಿಸಿದೆ.

ಪ್ರತೀ ವರ್ಷ ಹಜರತ್ ಸೈಯದ್ ಶಾ ನಸರುದ್ದೀನ್ ನಬಿರಾ ಖಾದ್ರಿ ಉರುಸ್ ವೇಳೆಯೇ ಗೋರಿಗಳು ಉಸಿರಾಡುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಉರುಸ್‌ನ 40 ದಿನಗಳ ಕಾಲ ಮಾತ್ರ ಗೋರಿಗಳು ಉಸಿರಾಡುತ್ತವೆಯಂತೆ. ಗೋರಿಯ ಉಸಿರಾಟದಿಂದ ಹೂಗಳು ಪುಟಿಯುತ್ತವೆ. ಜನರು ಮೂಕವಿಸ್ಮಿತರಾಗಿ ಅಚ್ಚರಿಯಿಂದ ನೋಡುತ್ತಿದ್ದಾರೆ.

ಪ್ರತಿ ದಿನ ಸಂಜೆಯಿಂದ ಬೆಳಗಿನವರೆಗೆ ಉಸಿರಾಡುವ ಗೋರಿಗಳನ್ನು ಕಂಡು ಜನರು ಅಚ್ಚರಿಪಟ್ಟಿದ್ದಾರೆ.

Share this article

ಟಾಪ್ ನ್ಯೂಸ್