Breaking:

ಮಸೀದಿಯೊಳಗೆ ಬಿಯರ್ ಬಾಟಲಿ ಎಸೆತ: ಪ್ರತಿಭಟನೆ

ರಾಯಚೂರು; ಮಸೀದಿಯೊಳಗೆ ಮದ್ಯದ ಬಾಟಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ

ಕೆಲ ಆಗಂತುಕರು ಮದ್ಯ ಕುಡಿದು ಬಿಯರ್ ಬಾಟಲಿಯನ್ನು ಮಸೀದಿ ಒಳಗಡೆ ಎಸೆದಿದ್ದರು. ವಿಷಯ ತಿಳಿದು ಸ್ಥಳೀಯರು ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ತಡರಾತ್ರಿ ಮುಖ್ಯರಸ್ತೆ ತಡೆದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಎಎಸ್ಪಿ ಶಿವಕುಮಾರ, ಡಿವೈಎಸ್ಪಿ ಬಿಎಸ್ ತಳವಾರ, ಸಿಪಿಐ ಶಶಿಕಾಂತ, ಪಿಎಸ್‌ಐ ಗುರುಚಂದ್ರ ಯಾದವ್ ಭೇಟಿ ನೀಡಿ ಪ್ರತಿಭಟನಾನಿರತರೊಂದಿಗೆ ಮಾತನಾಡಿ ಆರೋಪಿಗಳ ಬಂಧನ ಮಾಡುವ ಭರವಸೆ ನೀಡಿದ್ದಾರೆ.

ಬಳಿಕ ಪ್ರಕರಣಕ್ಕೆ ಸಂಬಂಧಿಸಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share this article

ಟಾಪ್ ನ್ಯೂಸ್