Breaking:

ಬಯಲು ಶೌಚಕ್ಕೆ ತೆರಳಿದ್ದ ಮಹಿಳೆ ಮೇಲೆ ಮಣ್ಣು ಸುರಿದ ಜೆಸಿಬಿ ಚಾಲಕ; ಮಹಿಳೆ ಉಸಿರುಗಟ್ಟಿ ಸಾವು

ಬಯಲು ಶೌಚಕ್ಕೆ ಹೋದ ಮಹಿಳೆ ಮೇಲೆ ಜೆಸಿಬಿ ಚಾಲಕ ತಿಳಿಯದೆ ಮಣ್ಣಿನ ರಾಶಿ ಹಾಕಿದ್ದು, ಉಸಿರಾಡಲು ಆಗದೆ ಮಹಿಳೆ ಮೃತಪಟ್ಟ ಘಟನೆ ರಾಯಚೂರು ನಗರದ ಆಶಾಪುರ ರಸ್ತೆಯ ಜನತಾ ಕಾಲೋನಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ತಾಯಮ್ಮ (32) ಎಂದು ಗುರುತಿಸಲಾಗಿದೆ. ನಿವೇಶನ ಸ್ವಚ್ಚ ಮಾಡುತ್ತಿದ್ದ ಜೆಸಿಬಿ ಚಾಲಕ ಆಕಸ್ಮಾತ್ ಆಗಿ ಮಣ್ಣು ಹಾಕಿದ್ದಾನೆ.

ಆ ಸ್ಥಳದಲ್ಲಿದ್ದ ಮಹಿಳೆ ತಾಯಮ್ಮ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this article

ಟಾಪ್ ನ್ಯೂಸ್