ಕರ್ನಾಟಕದಾದ್ಯಂತ ಇಂದಿನಿಂದ ಮತ್ತೆ ಭಾರಿ ಮಳೆ ಸುರಿವ ಸಾಧ್ಯತೆ ಇದೆ. ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿರಲಿದೆ ಎಂದು ತಿಳಿದು ಬಂದಿದೆ.
ಮಳೆ ಹಿನ್ನೆಲೆ 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಸನ, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್, ಬೆಳಗಾವಿ, ಮೈಸೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಳಸ, ನಾಪೊಕ್ಲು, ಧರ್ಮಸ್ಥಳ, ಕೊಪ್ಪ, ಪೊನ್ನಂಪೇಟೆ, ಕ್ಯಾಸಲ್ರಾಕ್, ಮೂರ್ನಾಡು, ಭಾಗಮಂಡಲ, ಕೊಟ್ಟಿಗೆಹಾರ, ಮಾಣಿ, ಸುಳ್ಯ, ಬೆಳ್ತಂಗಡಿ, ಜಯಪುರ, ಯಲ್ಲಾಪುರ, ಉಪ್ಪಿನಂಗಡಿ, ಕೊಲ್ಲೂರು, ಆನವಟ್ಟಿ, ಸೋಮವಾರಪೇಟೆ, ಎನ್ಆರ್ಪುರ, ಕದ್ರಾ, ಪುತ್ತೂರು, ಸಿದ್ದಾಪುರ, ಕಾರ್ಕಳ, ಬಾಳೆಹೊನ್ನೂರಿನಲ್ಲಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ, ಭೂ ಕುಸಿತ, ಕಂಪೌಂಡ್ ಗಳ ಕುಸಿತ, ಮನೆಗಳಿಗೆ ಹಾನಿ ಸಂಭವಿಸಿದೆ.