Breaking:

ಪ್ರಾದೇಶಿಕ ಪಕ್ಷಗಳಲ್ಲಿ ಈ ಬಾರಿ ಯಾವ ಪಕ್ಷಕ್ಕೆ ಅತ್ಯಧಿಕ ಆದಾಯ ಹರಿದು ಬಂದಿದೆ ಗೊತ್ತಾ?

ಹೊಸದಿಲ್ಲಿ: ಭಾರತ್ ರಾಷ್ಟ್ರ ಸಮಿತಿಯು 2022-23ರ ಆರ್ಥಿಕ ವರ್ಷಕ್ಕೆ ಪ್ರಾದೇಶಿಕ ಪಕ್ಷಗಳ ಆದಾಯ ಪಟ್ಟಿಯಲ್ಲಿ 737.67 ಕೋಟಿ ರೂ.ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅಂದರೆ ಎಲ್ಲಾ ಪ್ರಾದೇಶಿಕ ಪಕ್ಷಗಳ ಒಟ್ಟು ಶೇಕಡಾ ಆದಾಯದಲ್ಲಿ ಈ ಪಕ್ಷದ ಆದಾಯ 42.38 ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಎಡಿಆರ್ ತಿಳಿಸಿದೆ. 

ಅತ್ಯಧಿಕ ವೆಚ್ಚ ಮಾಡಿದ ಪಕ್ಷಗಳಲ್ಲಿ ತೃಣಮೂಲ ಕಾಂಗ್ರೆಸ್ ಅಗ್ರಸ್ಥಾನಿಯಾಗಿದೆ. ಈ ಪಕ್ಷ 181.1 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಇದು ಎಲ್ಲ ಪ್ರಾದೇಶಿಕ ಪಕ್ಷಗಳ ಒಟ್ಟು ಖರ್ಚಿನ ಶೇಕಡ 36.7ರಷ್ಟಾಗಿದೆ
ನಂತರದ ಸ್ಥಾನದಲ್ಲಿರುವ ವೈಎಸ್‌ಆರ್-ಕಾಂಗ್ರೆಸ್ 79.32 ಕೋಟಿ ಅಥವಾ ಶೇಕಡಾ 16.49, ಬಿಆರ್‌ಎಸ್ 57.47 ಕೋಟಿ ಅಥವಾ ಶೇಕಡಾ 11.94 ರಷ್ಟು ಖರ್ಚು ಮಾಡಿದೆ. 52.62 ಕೋಟಿ ಅಥವಾ ಶೇಕಡಾ 10.94 ರಷ್ಟು ಡಿಎಂಕೆ ಖರ್ಚು ಮಾಡಿದೆ.  ಸಮಾಜವಾದಿ ಪಕ್ಷವು 31.41 ಕೋಟಿ ರೂಪಾಯಿ ಅಥವಾ ಒಟ್ಟು ವೆಚ್ಚದ ಶೇಕಡಾ 6.53 ರಷ್ಟು ಖರ್ಚು ಮಾಡಿದೆ ಎಂದು ಎಡಿಆರ್ ಹೇಳಿದೆ.

ಎಡಿಆರ್ ಬಿಡುಗಡೆ ಮಾಡಿದ ಪ್ರಾದೇಶಿಕ ಪಕ್ಷಗಳ ಹಣಕಾಸು ಆರೋಗ್ಯ ಕುರಿತ ವರದಿಯಲ್ಲಿ ಈ ಅಂಕಿ ಅಂಶಗಳ ವಿವರಗಳಿವೆ. 57 ಪ್ರಾದೇಶಿಕ ಪಕ್ಷಗಳ ಪೈಕಿ 39 ಪಕ್ಷಗಳ ಆದಾಯ- ಖರ್ಚುಗಳನ್ನು ವಿಶ್ಲೇಷಿಸಲಾಗಿದೆ. ಬಿಆರ್ ಎಸ್ ಬಳಿಕ ಟಿಎಂಸಿ ಅತ್ಯಧಿಕ ಆದಾಯ ಗಳಿಸಿದ ಪಕ್ಷವಾಗಿದ್ದು, 333.45 ಕೋಟಿ (ಶೇಕಡ 19.1) ರೂಪಾಯಿ ಆದಾಯ ಗಳಿಸಿದೆ. 214.3 ಕೋಟಿ (12.3%) ಆದಾಯ ಗಳಿಸಿದ ಡಿಎಂಕೆ ನಂತರದ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.

ಒಟ್ಟು ಅಗ್ರ ಐದು ಪ್ರಾದೇಶಿಕ ಪಕ್ಷಗಳು 1541 ಕೋಟಿ ರೂಪಾಯಿ ಆದಾಯ ಹೊಂದಿದ್ದು, ಇದು 39 ಪಕ್ಷಗಳ ಒಟ್ಟು ಆದಾಯವಾದ 1740.4 ಕೋಟಿ ರೂಪಾಯಿಗಳಲ್ಲಿ ಶೇಕಡ 88.5ರಷ್ಟಾಗಿದೆ.


Share this article

ಟಾಪ್ ನ್ಯೂಸ್