ದರ್ಶನ್ ಗ್ಯಾಂಗ್ ನ್ನು ಜೈಲಿಗಟ್ಟಿದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಗೆ ಎಷ್ಟು ವೆಚ್ಚವಾಗಿದೆ ಎಂಬುವುದು ಎಲ್ಲರ ಕುತೂಹಲವಾಗಿದೆ. ಎಸಿಪಿ ಚಂದನ್ ನೇತೃತ್ವದ ತಂಡ ಕೊಲೆ ಪ್ರಕರಣದಲ್ಲಿ ದರ್ಶನ್ ಗೆ ಬಂಧಿಸಿತ್ತು. ಆ ಬಳಿಕ ಕೊಲೆಗೆ ಸಂಬಂಧಿಸಿ ಮಹತ್ವದ ಸಾಕ್ಷಿಯನ್ನು ಸಂಗ್ರಹಿಸಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾ ವೆಚ್ಚ ಈವರೆಗೆ 5 ಲಕ್ಷ ಎನ್ನಲಾಗಿದೆ. ಪ್ರಕರಣದ ತನಿಖೆಗೆ ಈವರೆಗೆ ಖಾಕಿ ಪಡೆ 5 ಲಕ್ಷ ವೆಚ್ಚ ಮಾಡಿದೆ ಎನ್ನಲಾಗಿದೆ. ಅದರಲ್ಲಿಯೂ ಎಲೆಕ್ಟ್ರಾನಿಕ್ ಡಿವೈಸ್ ಗಳ ಖರೀದಿಗೆ ಹೆಚ್ಚು ವೆಚ್ಚವಾಗಿರುವುದಾಗಿ ಹೇಳಲಾಗಿದೆ.
ಟ್ರಾನ್ಸ್ ಪೋರ್ಟ್, ಹಾರ್ಡ್ ಡಿಸ್ಕ್, ಪೆನ್ ಡ್ರೈವ್, ಪೇಪರ್, ಕಾರ್ಡ್ ರೀಡರ್, ಆರೋಪಿಗಳಿಗೆ ಊಟ ತಿಂಡಿ, ಹಾಗೂ ಎಫ್‌ಎಸ್‌ಎಲ್ ಸೇರಿ ಹಲವು ವಿಚಾರಗಳಿಗೆ ಪೊಲೀಸರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಸಾಕ್ಷಿಗಳ ಸ್ಟೋರೇಜ್ ಗಾಗಿ ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ಖರೀದಿ ಮಾಡಲಾಗಿದೆ. ಈ ಎಲ್ಲಾ ಮಾಹಿತಿಯನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಿರುವ ಪೊಲೀಸರು ಪ್ರಕರಣ ಸಂಬಂಧ ಈವರೆಗೆ ಪೊಲೀಸರು ಖರ್ಚು ಮಾಡಿದ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.