ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ 4ನೇ ಆರೋಪಿ ರಾಘವೇಂದ್ರ ರಘು ತಾಯಿ ಮಂಜುಳಮ್ಮ ನಿಧನರಾಗಿದ್ದಾರೆ.
ಚಿತ್ರದುರ್ಗದ ಕೋಳಿ ಬುರುಜನಹಟ್ಟಿ ನಿವಾಸದಲ್ಲಿ ಬೆಳಗಿನ ಜಾವ ಮಂಜುಳಮ್ಮ ಮೃತಪಟ್ಟಿದ್ದಾರೆ. ರಘುವನ್ನು ಪೊಲೀಸರು ತಾಯಿಯ ಅಂತ್ಯ ಸಂಸ್ಕಾರಕ್ಕೆ ಕರೆ ತರುವ ಸಾಧ್ಯತೆ ಇದೆ.
ರಘು ಜೈಲು ಸೇರಿದ್ದರಿಂದ ಮಂಜುಳಮ್ಮ ಖಿನ್ನತೆಗೆ ಒಳಗಾಗಿ ಅನಾರೋಗ್ಯದಿಂದ ಬಳಲುತಿದ್ದರು ಎಂದು ರಾಘವೇಂದ್ರ ಸಹೋದರ ಹೇಳಿಕೊಂಡಿದ್ದಾರೆ.
ಈ ಹಿಂದೆ ಪ್ರಕರಣದ ಮತ್ತೊಬ್ಬ ಆರೋಪಿ ಮನು ತಂದೆ ಕೂಡ ತಮ್ಮ ಮಗ ಅರೆಸ್ಟ್ ಆದ ಸುದ್ದಿ ಕೇಳಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದರು.