ಪ.ಬಂಗಾಳದ ಸರಕಾರಿ ಆರ್.ಜಿ.ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ವೇಳೆ ಮಹತ್ವದ ಮಾಹಿತಿಗಳು ಬಹಿರಂಗವಾಗಿದೆ.
ಪಿಜಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಜಯ್ ರಾಯ್ ಎಂಬ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ವೈದ್ಯೆಯ ಎರಡೂ ಕಣ್ಣುಗಳು, ಬಾಯಿಯಿಂದ ರಕ್ತಸ್ರಾವ ಉಂಟಾಗಿತ್ತು, ಮುಖದ ಮೇಲೆ ಗಾಯದ ಗುರುತುಗಳಿದ್ದವು. ವೈದ್ಯೆಯ ಮರ್ಮಾಂಗದಿಂದ ಕೂಡಾ ರಕ್ತಸ್ರಾವ ಆಗುತ್ತಿತ್ತು. ತೊಡೆ, ಎಡಕಾಲು, ಕುತ್ತಿಗೆ, ಬಲಗೈ, ಬೆರಳು, ತುಟಿಗಳ ಮೇಲೆ ಕೂಡಾ ಗಾಯದ ಗುರುತುಗಳಿದ್ದವು. ವೈದ್ಯೆಯ ಕಣ್ಣುಗಳಿಂದ ರಕ್ತ ಬರಲು ಕಾರಣವೇನು ಎಂಬ ಬಗ್ಗೆ ವ್ಯಾಪಕವಾದಂತಹ ಪ್ರಶ್ನೆ ಮೂಡಿತ್ತು. ಇದೀಗ ತನಿಖೆಯ ವೇಳೆ ವೈದ್ಯೆಯ ಕಣ್ಣಿನಿಂದ ರಕ್ತಸ್ರಾವವಾಗಿರುವುದರ ಹಿಂದಿನ ಕಾರಣ ಬಯಲಾಗಿದೆ.
ವೈದ್ಯೆಯ ಮೇಲೆ ಬಲವಾಗಿ ಹಲ್ಲೆ ನಡೆಸಿದ ಕಾರಣ ವೈದ್ಯೆಯ ಕಣ್ಣಡಕ ತುಂಡಾಗಿ ಅದರ ಗಾಜಿನ ಪುಡಿಗಳು ಕಣ್ಣಿಗೆ ಸೇರಿ ಆಕೆಯ ಕಣ್ಣಿನಿಂದ ರಕ್ತ ಬಂದಿದೆ ಎನ್ನುವುದು ಮರಣೋತ್ತರ ಪರೀಕ್ಷೆಯ ಅಟಾಪ್ಸಿ ವರದಿಯಲ್ಲಿ ಬಯಲಾಗಿದೆ.