ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ಕೋಲ್ಕತ್ತಾದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮಹತ್ವದ ಮಾಹಿತಿ ಲಭ್ಯವಾಗಿದೆ.
ಕೋಲ್ಕತ್ತದ ಆರ್ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಟ್ರೈನಿ ವೈದ್ಯೆಯ ದೇಹದಲ್ಲಿ ತುಂಬಾ ಗಾಯಳಾಗಿದ್ದು, ಅವೆಲ್ಲವೂ ಆಕೆ ಸಾಯುವ ಮೊದಲೇ ಆಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಂತ್ರಸ್ತೆಯ ಗುಪ್ತಾಂಗ, ತೋಳು, ಕುತ್ತಿಗೆ, ಮುಖ ಮತ್ತು ತಲೆಯಲ್ಲಿ ಸುಮಾರು 14ಕ್ಕೂ ಹೆಚ್ಚು ಗಾಯಗಳಾಗಿವೆ. ಕೈಯಿಂದ ಕತ್ತು ಹಿಸುಕಿದ ಕಾರಣಗ ಸಾವು ಉಂಟಾಗಿದೆ ಎಂದು ನಿರ್ಧರಿಸಲಾಗಿದೆ. ಸಾವಿನ ವಿಧಾನವನ್ನು ನರಹತ್ಯೆ ಅಥವಾ ಕೊಲೆ ಎಂದು ತೀರ್ಮಾನಿಸಲಾಗಿದೆ.
ಬಲವಂತದ ಲೈಂಗಿಕ ಕ್ರಿಯೆಯ ಸಾಕ್ಷ್ಯದೊಂದಿಗೆ ಸಂಭವನೀಯ ಲೈಂಗಿಕ ದೌರ್ಜನ್ಯವನ್ನು ಈ ವರದಿಯು ಸೂಚಿಸಿದೆ. ಸಂತ್ರಸ್ತೆಯ ಗುಪ್ತಾಂಗದಲ್ಲಿ ಬಿಳಿ, ದಪ್ಪ, ಸ್ನಿಗ್ಧ ದ್ರವ ಕಂಡುಬಂದಿದೆ. ಶ್ವಾಸಕೋಶದಲ್ಲಿ ರಕ್ತಸ್ರಾವ ಮತ್ತು ದೇಹದಲ್ಲಿ ರಕ್ತ ಹೆಪ್ಪುಗಟ್ಟಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.
ಮೂಳೆಗಳು ಮುರಿದಿರುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಇನ್ನು ಹೆಚ್ಚಿನ ವಿಶ್ಲೇಷಣೆಗಾಗಿ ಸಂತ್ರಸ್ತೆಯ ರಕ್ತ ಮತ್ತು ಇತರ ದೈಹಿಕ ದ್ರವಗಳ ಮಾದರಿಗಳನ್ನು ಲ್ಯಾಬ್ ಗೆ ಕಳುಹಿಸಲಾಗಿದೆ.