Breaking:

ಸೌದಿ ಅರೇಬಿಯಾ; ಹವಾಂತರ ಸೃಷ್ಟಿಸಿದ ಮಳೆ; 9 ಮಂದಿ ಮೃತ್ಯು

ಜೆದ್ದಾ: ಸೌದಿ ಅರೇಬಿಯಾದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹಕ್ಕೆ ಸಿಲುಕಿ 9 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ನೈಋತ್ಯ ಪ್ರದೇಶದ ಜೀಝಾನ್ ನಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹದಲ್ಲಿ ಇಬ್ಬರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ. ಜಸ್ಸಾನ್ ನ ಸಬಿಯಾ ಮತ್ತು ಅಬು ಅರಿಶ್ ಪ್ರದೇಶಗಳನ್ನು ಸಂಪರ್ಕಿಸುವ ಸೇತುವೆ ಭಾಗಶಃ ಕುಸಿದ ಪರಿಣಾಮ ದಂಪತಿ ಸಾವನ್ನಪ್ಪಿದ್ದಾರೆ.

ಈಗೆ ಸೌದಿ ಅರೇಬಿಯಾದ ವಿವಿಧೆಡೆ ಇಂದು ಸುರಿದ ಭಾರೀ ಮಳೆಗೆ 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

 

Share this article

ಟಾಪ್ ನ್ಯೂಸ್