Breaking:

ಶಾಲೆಗೆ ಮಾಂಸಹಾರ ತಂದಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿಯನ್ನು ಅಮಾನತು ಮಾಡಿದ ಪ್ರಾಂಶುಪಾಲ!

ಶಾಲೆಗೆ ಮಾಂಸಹಾರ ತಂದಿದ್ದಿ ಎಂದು ಆರೋಪಿಸಿ ಪ್ರಾಂಶುಪಾಲನೋರ್ವ ಮುಸ್ಲಿಂ ವಿದ್ಯಾರ್ಥಿಯನ್ನು ಸ್ಕೂಲ್​ನಿಂದ ಅಮಾನತು ಮಾಡಿರುವ ಘಟನೆ ಉತ್ತರಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ.

ಅಮ್ರೋಹಾದ ಹಿಲ್ಟನ್​ ಪಬ್ಲಿಕ್​ ಸ್ಕೂಲ್​ನಲ್ಲಿ ಈ ಘಟನೆ ನಡೆದಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಪ್ರಾಂಶುಪಾಲರು ಮತ್ತು ಮಗುವಿನ ತಾಯಿ ನಡುವೆ ತೀವ್ರ ವಾಗ್ವಾದ ನಡೆದಿರುವುದನ್ನು ನೋಡಬಹುದಾಗಿದೆ.

ನಾನ್ ವೆಜ್ ತಿನ್ನಿಸಿ ಅವರನ್ನು ಇಸ್ಲಾಂಗೆ ಪರಿವರ್ತಿಸುತ್ತಾನೆಂದು ಬಾಲಕನ ವಿರುದ್ಧ ಪ್ರಾಂಶುಪಾಲರು ಆರೋಪಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಯ ತಾಯಿ ತನ್ನ ಮಗನು ಶಾಲೆಗೆ ಮಾಂಸಹಾರ ತಂದಿಲ್ಲ. ಆತ ತಂದಿರುವುದು ಶುದ್ಧ ಸಸ್ಯಾಹಾರಿ ಎಂದು ಹೇಳುತ್ತಿರುವುದು ನೋಡಬಹುದಾಗಿದೆ. ಇದಕ್ಕೆ ಉತ್ತರಿಸಿದ ಪ್ರಾಂಶುಪಾಲ ನಿಮ್ಮ ಮಗ ಶಾಲೆಗೆ ತಂದಿರುವುದು ನಾನ್​ವೆಜ್​ ಊಟ. ಆತ ಎಲ್ಲರಿಗೂ ನಾನ್​ವೆಜ್​ ತಿನ್ನಿಸಿ ಇಸ್ಲಾಂಗೆ ಮತಾಂತರಿಸಲು ಮುಂದಾಗಿದ್ದಾನೆ ಎಂದು ಹೇಳಿದ್ದಾರೆ.

ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅಮ್ರೋಹಾ ಜಿಲ್ಲಾ ಶಿಕ್ಷಣಾಧಿಕಾರಿ ಮೂರು ಜನರ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶಿಸಿದ್ದು, ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

Share this article

ಟಾಪ್ ನ್ಯೂಸ್