Breaking:

ಮಲಯಾಳಂ ಚಿತ್ರರಂಗದಲ್ಲಿ ತನಗಾದ ಅನುಭವ ತೆರೆದಿಟ್ಟ ನಟಿ ಶಕೀಲಾ

ಮಲಯಾಳಂ ಚಿತ್ರರಂಗದಲ್ಲಿ ಮಿಂಚಿದ ನಟಿ ಶಕೀಲಾ ಸದ್ಯ ಬಣ್ಣದ ಪ್ರಪಂಚದಿಂದ ದೂರ ಉಳಿದುಬಿಟ್ಟಿದ್ದಾರೆ. ತನಗಾದ ಕಷ್ಟಗಳನ್ನು ಆಗಾಗ ಸಂದರ್ಶನಗಳಲ್ಲಿ ಶಕೀಲಾ ಹಂಚಿಕೊಳ್ಳುತ್ತಾರೆ. ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮೀ ಟೂ ಆರೋಪ ಮತ್ತು ಹೇಮಾ ಮಹಿಳಾ ಸಮಿತಿ ಸಲ್ಲಿಸಿರುವ ವರದಿ ಬಗ್ಗೆ ಶಕೀಲಾ ಪ್ರತಿಕ್ರಿಯೆ ನೀಡಿದ್ದಾರೆ.

ರೂಪಾಶ್ರೀ ಎಂದ ನಟಿ ಚಿತ್ರವೊಂದರಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದೆ, ಆ ಸಮಯದಲ್ಲಿ ನಾಲ್ಕು ಜನರು ಮಧ್ಯಪಾನ ಸೇವಿಸಿ ರೂಪಾಶ್ರೀ ಕೋಣೆಗೆ ಬಲವಂತವಾಗಿ ಹೋಗಲು ಪ್ರಯತ್ನ ಪಟ್ಟಿದ್ದಾರೆ ಆ ವಿಚಾರ ನನ್ನ ಕಿವಿಗೆ ಬೀಳುತ್ತಿದ್ದಂತೆ ನಾನು ತಕ್ಷಣವೇ ಅಲ್ಲಿಗೆ ಹೋಗಿ ಆ ನಾಲ್ಕು ಜನರನ್ನು ಬೈದು ಕಳುಹಿಸಿದ್ದೀನಿ ಎಂದು ಶಕೀಲಾ ಹೇಳಿದ್ದಾರೆ.

ಇನ್ನು ಶಕೀಲಾ ತಮ್ಮ ಮೊದಲ ಚಿತ್ರದಲ್ಲಿ ಬಿಕಿನಿ ಧರಿಸಿ ಮೇಕಪ್‌ಗೆಂದು ಕುಳಿತುಕೊಂಡಾಗ ಮೇಕಪ್ ಮ್ಯಾನ್ ಎಲ್ಲೆಲ್ಲಿ ಹೇಗೆಲ್ಲ ಮುಟ್ಟಿದ್ದ ಅನ್ನುವುದು ನನಗೆ ಮಾತ್ರ ಗೊತ್ತಿದೆ ಆಗ ನನಗೆ ತುಂಬಾ ಹಿಂಸೆ ಆಯ್ತು ಎಂದು ಹೇಳಿದ್ದಾರೆ.

ಗೋಲ್‌ಮಾಲ್‌ ಚಿತ್ರದಲ್ಲಿ ಆಕ್ಟ್ ಮಾಡುವಾಗ ವಸ್ತ್ರವಿನ್ಯಾಸಕರೊಬ್ಬರು ನನ್ನ ಮನೆಗೆ ಬಂದು ಅಳತೆ ತೆಗೆದುಕೊಂಡಿದ್ದರು. ಆ ಸಮಯದಲ್ಲಿ ಅವರು ಕೂಡ ನನ್ನ ಜೊತೆ ತೀರಾ ಅಸಭ್ಯವಾಗಿ ವರ್ತಿಸಿದ್ದರು ಎಂದು ಶಕೀಲಾ ಹೇಳಿದ್ದಾರೆ.



Share this article

ಟಾಪ್ ನ್ಯೂಸ್