Breaking:

ಶಿವಮೊಗ್ಗ: ಯುವಕನ ಮೇಲೆ ಹಲ್ಲೆ ನಡೆಸಿದ ತಂಡ; ಯುವಕ ಆಸ್ಪತ್ರೆಗೆ ದಾಖಲು

-ತಬ್ರೀಜ್ ಅಹ್ಮದ್ ಹಲ್ಲೆಗೊಳಗಾದ ಯುವಕ

ಶಿವಮೊಗ್ಗ; ಯುವಕನೋರ್ವನಿಗೆ ಮೂವರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಟೌನ್ ಶಿಶುಹಾರ ರಸ್ತೆಯಲ್ಲಿ ನಡೆದಿದೆ.

ತಬ್ರೀಜ್ ಅಹಮ್ಮದ್ ಹಲ್ಲೆಗೊಳಗಾದ ಯುವಕ. ಇವರ ಮೇಲೆ ಪ್ರಕಾಶ್, ಮಾರುತಿ, ಮನು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.

ಶಿಶುವಿಹಾರ ರಸ್ತೆಯಲ್ಲಿರುವ ಪಂಚಮಿ ಹೊಟೇಲ್ ಗೆ ಬಂದು ಮತ್ತೆ ವಾಪಾಸ್ಸಾಗಲು ಬೈಕ್ ಸ್ಟಾರ್ಟ್ ಮಾಡುವಾಗ ಬಂದ ಪ್ರಕಾಶ್, ಮಾರುತಿ, ಮನು, ತಬ್ರೀಜ್ ಗೆ 500 ರೂ. ಹಣ ಕೊಡುವಂತೆ ಕೇಳಿದ್ದಾರೆ. ಈ ವೇಳೆ ತಬ್ರೀಜ್ ನಿಮಗೆ ಯಾಕೆ ಹಣ ಕೊಡಬೇಕೆಂದು ಪ್ರಶ್ನಿಸಿದ್ದಾನೆ. ಈ ವೇಳೆ ಪ್ರಕಾಶ್ ತನ್ನ ಕೈಯ್ಯಲ್ಲಿದ್ದ  ಹಿತ್ತಾಳೆ ಬಳೆಯಿಂದ ತಬ್ರೀಜ್ ನ ತುಟಿಗೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾನೆ. ಇದಲ್ಲದೆ ಮಾರುತಿ  ಮತ್ತು ಮನು ಕೂಡ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪಕ್ಕದ ಅಂಗಡಿಯವರು ಬಂದು ಗಲಾಟೆ ಬಿಡಿಸಿದ್ದು, ತಬ್ರೀಝ್ ಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

 

 

Share this article

ಟಾಪ್ ನ್ಯೂಸ್