ಮೂಡಾ ಹಗರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ, ನಮ್ಮಣ್ಣ ಯಾವ ತಪ್ಪೂ ಮಾಡಿಲ್ಲ. ಅವರು ರಾಜೀನಾಮೆ ಕೊಡುವುದೂ ಇಲ್ಲ. ಅವನು ಯಾವದಕ್ಕೂ ಜಗ್ಗಲ್ಲ ಎಂದು ಹೇಳಿದ್ದಾರೆ.
ಮುಡಾ ಹಗರಣ ಸಂಬಂಧ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದೇಗೌಡ, ಬಿಜೆಪಿ-ಜೆಡಿಎಸ್‌ನವರ ಕೈವಾಡದಿಂದ ರಾಜ್ಯಪಾಲರು ಹೀಗೆ ಮಾಡ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಹೇಳಿದಂತೆ ಕುಣಿಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಷ್ಟು ಸುಲಭದಲ್ಲಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ. ಅವ ತಪ್ಪು ಮಾಡಿದ್ದರೆ ರಾಜೀನಾಮೆ ಕೊಡುವ, ತಪ್ಪೇ ಮಾಡದಿದ್ದ ಮೇಲೆ ಯಾಕ್ ಕೊಡ್ತಾರೆ. ಅವರು ತಪ್ಪೇ ಮಾಡಿಲ್ವಲ್ಲ. 108 ಸಲ ನಾ ತಪ್ಪು ಮಾಡಿಲ್ಲ, ನಾ ಯಾರಿಗೂ ಜ ಗ್ಗೋದಿಲ್ಲ ಎಂದು ಅವರೇ ಹೇಳಿದ್ದಾರಲ್ಲ. ತಪ್ಪು ಮಾಡಿದ್ದರೆ ರಾಜೀನಾಮೆ ಕೇಳಲಿ. ಅದು ಬಿಟ್ಟು ರಾಜೀ ನಾಮೆ ಕೊಡಿ ಅಂದ್ರೆ ಹೆಂಗೆ ಎಂದು ಪ್ರಶ್ನಿಸಿದ್ದಾರೆ.