Breaking:

ಪತಿಯ ಹಂತಕರ ಬಿಡುಗಡೆ ಬಗ್ಗೆ ಸದನದಲ್ಲಿ ಕಣ್ಣೀರು ಹಾಕಿದ ಶಾಸಕಿ

ಉತ್ತರಪ್ರದೇಶದಲ್ಲಿ  ಜವಾಹರ್ ಯಾದವ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಬಿಜೆಪಿಯ ಮಾಜಿ ಶಾಸಕ ಉದಯ್ ಭಾನ್ ಕಾರವಾರಿಯಾ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಅವರ ಪತ್ನಿ ಶಾಸಕಿ ವಿಜ್ಮಾ ಯಾದವ್, ಪತಿಯಂತೆ ತಾವೂ ಸಹ ಕೊಲೆಯಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕಣ್ಣೀರು ಸುರಿಸುತ್ತಾ ಮಾತನಾಡಿದ ಅವರು, ನನ್ನ ಪತಿ ಶಾಸಕರಾಗಿದ್ದರು. ಅವರೊಂದಿಗೆ ಮೂವರನ್ನು ಹತ್ಯೆ ಮಾಡಲಾಗಿತ್ತು. ಹಗಲು ಹೊತ್ತಿನಲ್ಲಿ ಎಕೆ 47 ಬಂದೂಕು ಬಳಸಿ ಗುಂಡಿಕ್ಕಿದವರನ್ನು ಈಗ ಖುಲಾಸೆಗೊಳಿಸಲಾಗಿದೆ. ನಾಳೆ ನಾನು ಕೂಡ ಕೊಲೆಯಾಗಬಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಮಾಜಿ ಶಾಸಕ ಉದಯ್ ಭಾನ್ ಕಾರವಾರಿಯಾ ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ‌. ಇವರ ಬಿಡುಗಡೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿ ನನ್ನ ಪತಿಯನ್ನು ಪ್ರಯಾಗ್‌ರಾಜ್‌ನಲ್ಲಿ ಕೊಲೆ ಮಾಡಲಾಗಿದೆ. 18 ವರ್ಷಗಳ ನಂತರ ನನಗೆ ನ್ಯಾಯಾಲಯದಿಂದ ನ್ಯಾಯ ಸಿಕ್ಕಿತ್ತು. ಆದರೆ ಇದೀಗ ಸನ್ನಡತೆಯ ಆಧಾರದಲ್ಲಿ ಅವರನ್ನು ರಾಜ್ಯ ಸರ್ಕಾರ ಅವರನ್ನು ಬಿಡುಗಡೆಗೊಳಿಸಿದ್ದು, ನಾಳೆ ನಾನು ಕೊಲೆಯಾಗಬಹುದು ಎಂದು ಸದನದಲ್ಲಿ ಸಿಎಂ ಯೋಗಿ ಮುಂದೆ ಅಳಲು ತೋಡಿಕೊಡಿದ್ದಾರೆ.

Share this article

ಟಾಪ್ ನ್ಯೂಸ್