ಬಾಂಬೆ ಷೇರುಪೇಟೆ ವಹಿವಾಟು ಸತತ ಐದು ದಿನಗಳಿಂದ ಏರುಗತಿಯಲ್ಲಿ ನಡೆಯುತ್ತಿದ್ದು, ಶುಕ್ರವಾರ ಷೇರುಪೇಟೆ ಸಂವೇದಿ ಸೂಚ್ಯಂಕ 300.87 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ ಮಧ್ಯಾಹ್ನ 326.23 ಅಂಕಗಳಷ್ಟು ಏರಿಕೆಯೊಂದಿಗೆ 82,470.82 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆದಿದೆ.
ಅದೇ ರೀತಿ ನಿಫ್ಟಿ 85.80 ಅಂಕ ಜಿಗಿತದೊಂದಿಗೆ 25.237.80 ಅಂಕಗಳ ಗಡಿಯಲ್ಲಿದೆ.
ಬಿಎಸ್ ಇ, ನಿಫ್ಟಿ ಏರಿಕೆಯಿಂದ ಪವರ್ ಗ್ರಿಡ್ ಕಾರ್ಪ್, ಭಾರ್ತಿ ಏರ್ ಟೆಲ್, ಮಹೀಂದ್ರ & ಮಹೀಂದ್ರ, ಬಜಾಜ್ ಫೈನಾನ್ಸ್, ಸನ್ ಫಾರ್ಮಾ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಟಾಟಾ ಮೋಟಾರ್ಸ್, ರಿಲಯನ್ಸ್ ಇಂಡಸ್ಟ್ರಿಸ್, ಐಟಿಸಿ, ವಿಪ್ರೋ ಮತ್ತು ಮಾರುತಿ ಸುಝುಕಿ ಷೇರು ನಷ್ಟ ಕಂಡಿದೆ.
ನಿಫ್ಟಿ 25,237 ಅಂಕಗಳ ಗಡಿ ದಾಟುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟ ದಾಟಿದೆ. ಜಿಡಿಪಿ(GDP) ಮೊದಲ ತ್ರೈಮಾಸಿಕದ ಅಂಕಿ ಅಂಶ ಇಂದು ಸಂಜೆ ಬಿಡುಗಡೆಯಾಗಲಿದ್ದು, ಈ ನಿಟ್ಟಿನಲ್ಲಿ ಷೇರುಪೇಟೆ ವಹಿವಾಟು ನಿರೀಕ್ಷೆಯೊಂದಿಗೆ ಧನಾತ್ಮಕ ಪರಿಣಾಮ ಬೀರಿರುವುದಾಗಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.