Breaking:

ಮೊಬೈಲ್ ಜಾರ್ಜ್ ಇಡುವಾಗ ವಿದ್ಯುತ್ ಸ್ಪರ್ಶಿಸಿ ಬಾಲಕಿ ಮೃತ್ಯು

ತೆಲಂಗಾಣ: ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ 4ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಚಿಂತಕಣಿಲ್ಲಿ ನಡೆದಿದೆ.

ಖಮ್ಮಂ ಜಿಲ್ಲೆಯ ಚಿಂತಕಣಿ ಮಂಡಲದ ಮಟ್ಕೆಪಲ್ಲಿ ನಾಮವರಂ ಗ್ರಾಮದ ಕಟಿಕಳ ರಾಮಕೃಷ್ಣ ದಂಪತಿಯ ಮಗಳು ಅಂಜಲಿ ಕಾರ್ತಿಕಾ (9) ಮೃತ ಬಾಲಕಿ.

ಅಂಜಲಿ ತನ್ನ ತಂದೆಯ ಮೊಬೈಲ್ ಚಾರ್ಜ್ ಮಾಡುವಾಗ  ವಿದ್ಯುತ್ ಸ್ಪರ್ಶದಿಂದ ಕುಸಿದು ಬಿದ್ದಿದ್ದಾಳೆ. ತಕ್ಷಣ ಬಾಲಕಿಯನ್ನು ಆಕೆಯ ಪೋಷಕರು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆದರೆ ಬಾಲಕಿ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ಬಾಲಕಿ ಆಟವಾಡುತ್ತಿದ್ದಂತೆ ಒದ್ದೆ ಕೈಯಲ್ಲಿ ಹೋಗಿ ವಿದ್ಯುತ್ ಸ್ಪರ್ಶಿಸಿರುವುದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

Share this article

ಟಾಪ್ ನ್ಯೂಸ್