ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೆ ಕಿಡಿಕಾರಿದ್ದಾರೆ.
ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ, ಲಡಾಖ್‌ನಲ್ಲಿ ಭಾರತದ 4067 ಚದರ KM ಭೂಮಿ ಚೀನಾ ಆಕ್ರಮಿಸಿದಾಗ ಮೋದಿ ಹೇಡಿಯಂತೆ ಇದ್ದರು. ಮಾಲ್ಡೀವ್ಸ್ ನಾಯಕರು ಭಾರತೀಯರು ತಮ್ಮ ದೇಶವನ್ನು ತೊರೆಯುವಂತೆ ಕರೆ ನೀಡಿದಾಗ ಮೋದಿ ಸುಮ್ಮನಿದ್ದರು. ಈಗ ಬಾಂಗ್ಲಾ ಪ್ರಧಾನಿಯನ್ನು ಮುಸ್ಲಿಮರು ಬೆನ್ನಟ್ಟುತ್ತಿರುವಾಗ ನಡುಗುತ್ತಿದ್ದಾರೆ. ನೇಪಾಳದ ಬಗ್ಗೆ ಕೇಳಬೇಡಿ.. ಮೋದಿಯವರಿಗೆ ರಾಜೀನಾಮೆ ಕೊಡಿ ಎಂದು ಕೇಳಿ ಎಂದು ಹೇಳಿದ್ದಾರೆ.
ಚೀನಾ, ಪಾಕಿಸ್ತಾನ ಮತ್ತು ಪರೋಕ್ಷವಾಗಿ ಅಮೆರಿಕವು ಬಾಂಗ್ಲಾದಲ್ಲಿ ಹೊಸ ಸರ್ಕಾರ ರಚನೆಗೆ ಬೆಂಬಲ ನೀಡಿದೆ. ಆದರೆ ಭಾರತವು ಒಳ್ಳೆಯದು ಅಥವಾ ಕೆಟ್ಟದು ಎಂದು ಹೇಳುತ್ತಿಲ್ಲ. ಯಾರೂ ಬಂದಿಲ್ಲ ಎನ್ನುವ ರೀತಿಯ ವರ್ತನೆ ಮಾಡುತ್ತಿದೆ? ಹಸೀನಾರನ್ನು ಕೈಬಿಡುವ ಯೋಜನೆ ಮೋದಿ ಮಾಡಬಹುದು ಎಂದು ಹೇಳಿದ್ದಾರೆ.