ಅಪ್ಪ-ಅಮ್ಮನಿಗೆ ಮಗಳು ಪಾರಿನ್ ಗೆ ಹೋಗುವುದಾಗಿ ಹೇಳಿ ಏರ್ ಪೋರ್ಟ್ ತನಕ ಕರೆದುಕೊಂಡು ಬಂದು ಬಳಿಕ ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಯುವತಿ ಈ ವರ್ಷವಷ್ಟೇ ಪಿಯುಸು ಪಾಸ್ ಆಗಿದ್ದಳು.
ವಿದೇಶದಲ್ಲಿ ನನಗೆ ಕೆಲಸ ಸಿಕ್ಕಿದೆ. ಅಲ್ಲಿಗೆ ಹೋಗಬೇಕು. ಪಾಸ್‌ಪೋರ್ಟ್ ಕೂಡ ರೆಡಿ ಮಾಡಿಕೊಂಡಿದ್ದೇನೆ. ವಿಮಾನದ ಟಿಕೆಟ್ ಕೂಡ ಬುಕ್ ಆಗಿದೆ ಎಂದು ಪೋಷಕರಿಗೆ ನಂಬಿಸಿದ್ದಳು. ಅದರಂತೆ ಪೋಷಕರು ಕೂಡ ಮಗಳಿಗೆ ಏನೋ ಒಳ್ಳೆಯದಾಗುತ್ತದೆ ಎಂದುಕೊಂಡು ಬೆಂಗಳೂರು ಏರ್‌ಪೋರ್ಟ್‌ಗೆ ಬಂದು ಆಕೆಯ ಏರ್‌ಪೋರ್ಟ್‌ನ ಒಳಹೋಗುವವರೆಗೂ ಕಾದು ಮನೆಗೆ ಹೊರಟಿದ್ದರು. ಆದರೆ, ಅಪ್ಪ-ಅಮ್ಮ ಅಲ್ಲಿಂದ ಹೋಗುತ್ತಿರುವುದನ್ನೇ ಕಾಯುತ್ತಿದ್ದ ಯುವತಿ, ಅಲ್ಲಿಂದ ಅನ್ಯಕೋಮಿನ ಯುವಕನ ಜೊತೆ ಎಸ್ಕೇಪ್ ಆಗಿದ್ದಾಳೆ.
ಮಗಳನ್ನು ಏರ್‌ಪೋರ್ಟ್‌ಗೆ ಬಿಟ್ಟು ಮನೆಗೆ ಬಂದ ಕುಟುಂಬದವರು, ತಮ್ಮ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಇದರ ಮಾಹಿತಿಗಳನ್ನೂ ಕೂಡ ಹಂಚಿಕೊಂಡಿದ್ದಾರೆ.
ಮನೆಗೆ ಬಂದಾಯಿತು ಹೇಗಿದ್ದರೂ ಒಂದು ಫೋನ್ ಮಾಡೋಣ, ವಿಮಾನ ಹೊರಟಿತಾ ಎಂದು ಕೇಳೋಣ ಎಂದು ಕರೆ ಮಾಡಿದ್ದಾರೆ. ಈ ವೇಳೆ ಆಕೆಯ ಫೋನ್ ರಿಂಗ್ ಆಗಿದೆ. ಫೋನ್ ರಿಂಗ್ ಆಗಿದ್ದಿರಂದ ಮನೆಯವರಿಗೆ ಅನುಮಾನ ಶುರುವಾಗಿದೆ.
ಇದು ಗೊತ್ತಾದ ಬಳಿಕ ಯುವತಿಯ ಪೋಷಕರು ಬೆಂಗಳೂರಿನಲ್ಲಿ ಮಗಳು ನಾಪತ್ತೆಯಾಗಿರುವ ದೂರು ದಾಖಲು ಮಾಡಿದ್ದಾರೆ.