Breaking:

ಸುನೀತಾ ವಿಲಿಯಂ, ವಿಲ್ಮೋರ್‌ ಅವರನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಭೂಮಿಗೆ ವಾಪಾಸ್ಸಾದ ಸ್ಟಾರ್ ಲೈನರ್

ಗಗನಯಾತ್ರಿಗಳಾದ ಸುನೀತಾ ವಿಲಿಯಂ ಹಾಗೂ ಬುಚ್‌ ವಿಲ್ಮೋರ್‌ ಅವಬಾಹ್ಯಾಕಾಶಕ್ಕೆ ಕರೆದೊಯ್ದಿದ್ದ ಬಾಹ್ಯಾಕಾಶ ನೌಕೆ ಸ್ಟಾರ್‌ಲೈನರ್‌ ಅವರಿಬ್ಬರನ್ನೂ ಅಲ್ಲೇ ಬಿಟ್ಟು ಭೂಮಿಗೆ ಮರಳಿದೆ.

ಬೋಯಿಂಗ್‌ ಸಂಸ್ಥೆಯ ನೌಕೆ ಸ್ಟಾರ್‌ಲೈನರ್‌ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ, ಅದರಲ್ಲಿ ಗಗನಯಾತ್ರಿಗಳನ್ನು ಕರೆಸಿಕೊಳ್ಳುವ ರಿಕ್ಸ್‌ ತೆಗೆದುಕೊಳ್ಳಲು ಇಚ್ಛಿಸದ ನಾಸಾ (NASA),ಅವರಿಲ್ಲದೇ ಸ್ಟಾರ್‌ಲೈನರ್‌ ಅನ್ನು ಮರಳಿ ತರಿಸಿದೆ.

ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (Internationa Space Station – ISS) ಉಳಿದಿದ್ದಾರೆ.

ತಡರಾತ್ರಿ ಐಸ್‌ಎಸ್‌ನಿಂದ ಕಳಚಿಕೊಂಡು ಹೊರಟ ಕ್ಯಾಪ್ಸುಲ್, ಬೆಳಿಗ್ಗೆ ಸುಮಾರು 9:30ಕ್ಕೆ ನ್ಯೂ ಮೆಕ್ಸಿಕೋದಲ್ಲಿನ ವೈಟ್ ಸ್ಯಾಂಡ್ಸ್ ಸ್ಪೇಸ್ ಹಾರ್ಬರ್‌ನಲ್ಲಿ ನಿಧಾನವಾಗಿ ಇಳಿಯಿತು. ಪ್ಯಾರಾಚೂಟ್‌ಗಳು ಹಾಗೂ ಏರ್‌ಬ್ಯಾಗ್‌ಗಳ ಮೂಲಕ ಇಳಿದ ನೌಕೆ ದಾರಿಯಲ್ಲಿ ಯಾವುದೇ ತೊಂದರೆಗೆ ಒಳಗಾಗಲಿಲ್ಲ.

ಹಲವು ವರ್ಷಗಳ ವಿಳಂಬದ ನಂತರ ಸ್ಟಾರ್‌ಲೈನರ್ ಜೂನ್‌ನಲ್ಲಿ ಒಂದು ವಾರದ ಪರೀಕ್ಷಾರ್ಥ ಉಡ್ಡಯನ ಪ್ರಾರಂಭಿಸಿತ್ತು. ಲೆಕ್ಕಾಚಾರದ ಪ್ರಕಾರ ಒಂದು ವಾರದ ಬಳಿಕ ಅದು ಗಗನಯಾತ್ರಿಗಳನ್ನು ಕುಳ್ಳಿರಿಸಿಕೊಂಡು ಮರಳಬೇಕಿತ್ತು. ಆದರೆ ಥ್ರಸ್ಟರ್‌ನಲ್ಲಿ ಕಾಣಿಸಿಕೊಂಡ ದೋಷ ಮತ್ತು ಹೀಲಿಯಂ ಸೋರಿಕೆಗಳ ಪರಿಣಾಮ ಆ ಯೋಜನೆಗೆ ಅಡ್ಡಿಯಾಗಿದೆ.

ಅಂತಿಮವಾಗಿ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಪ್ರತಿಸ್ಪರ್ಧಿ ಸ್ಪೇಸ್‌ಎಕ್ಸ್ ಕ್ರ್ಯೂ ಡ್ರ್ಯಾಗನ್‌ ಮೂಲಕ ಕರೆತರುವುದು ಸುರಕ್ಷಿತ ಎಂದು ನಾಸಾ ನಿರ್ಧರಿಸಿದೆ. ಆದರೆ ಇದಕ್ಕಾಗಿ ಅವರು ಫೆಬ್ರವರಿ 2025 ರವರೆಗೆ ಕಾಯಬೇಕಾಗಿದೆ.‌ ಆರಂಭದಲ್ಲಿ ಎಂಟು ದಿನಗಳ ಪರೀಕ್ಷೆ ಎಂದು ಭಾವಿಸಲಾಗಿದ್ದ ಸಿಬ್ಬಂದಿಗೆ ಎಂಟು ತಿಂಗಳ ಕಾರ್ಯಾಚರಣೆಯಾಗಿ ಮಾರ್ಪಟ್ಟಿದೆ. ವಿಲ್ಮೋರ್ ಮತ್ತು ವಿಲಿಯಮ್ಸ್, ಐಎಸ್‌ಎಸ್‌ನಲ್ಲಿ ಉಳಿಯಲಿದ್ದಾರೆ. ಇಲ್ಲಿ ಹೆಚ್ಚುವರಿ ಆಹಾರ ಮತ್ತು ಸರಬರಾಜು ಸಂಗ್ರಹ ಇದೆ.

Share this article

ಟಾಪ್ ನ್ಯೂಸ್